ಬೆಂಗಳೂರು (ಅ.01): ಮುಸ್ಲೀಂ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಕ್ಕೆ ಮೌಲಾನ ಆಜಾದ್ ಟ್ರಸ್ಟ್ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. 

ಶೈಕ್ಷಣಿಕವಾಗಿ ಹಿಂದುಳಿದವರಿಗೆ ಆಧುನಿಕ ಶಿಕ್ಷಣ ಹಾಗೈ ವೈಜ್ಞಾನಿಕ ಮನೋಭಾಗ ಉತ್ತೇಜಿಸುವ ಸಲುವಾಗಿ ಹೊಸ ಟ್ರಸ್ಟ್ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. 

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲು ಅಧಿಕೃತವಾಗಿ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಸುಮಾರು 25 ಸಾವಿರ ಕೋಟಿ  ವೆಚ್ಚದಲ್ಲಿ  ಟ್ರಸ್ಟ್ ಸ್ಥಾಪಿಸುವ  ಕುರಿತು ಅಲ್ಪ ಸಮಖ್ಯಾತ ಕಲ್ಯಾಣ  ಇಲಾಖೆ ಅಡಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. 

ಅ. 15 ರಿಂದ ಶಾಲೆ ಆರಂಭಕ್ಕೆ ಸಮ್ಮತಿ: ಪೋಷಕರೇ ನಿಮಗೂ ಇದೆ ಈ ನಿಯಮಗಳು! ...

ಇನ್ನು ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಸಬ್ ಇನ್ಸ್ಪೆಲ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ  ಕ್ರೀಡಾಪಟುಗಳನ್ನು ನೇರ ನೇಮಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 2020 - 21 ನೇ ಸಾಲಿನ  91 ಸಾವಿರ ನೊಂದಾಯಿತ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸುವುದು.  76 ಸಾವಿರ ಕಾರ್ಮಿಕರಿಗೆ ಮಷಿನ್ ಟೂಲ್ ಕಿಟ್‌ಗಳನ್ನು ನೀಡುವ ಕುರಿತು ಸಂಪುಟದಲ್ಲಿ ನಿರ್ಧಾರವಾಗಲಿದೆ. 

ಟಾಟಾ ಟೆಕ್ನಾಲಜಿಸ್ ಸಹಭಾಗಿತ್ವದಲ್ಲಿ 150 ಸರ್ಕಾರಿ ಐಟಿಐಗಳನ್ನು 4636 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನ ಮಾಡಲಾಗುತ್ತದೆ.  
ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಟೂಲ್ ಕಿಟ್‍ಗಳನ್ನು ನೀಡುವ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಲಿದೆ.