Asianet Suvarna News Asianet Suvarna News

SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಿಎಂ

* 2020-21 ನೇ ಸಾಲಿನ SSLC ಪರೀಕ್ಷೆ ಪ್ರಾರಂಭ
* ಎರಡು ದಿನಗಳ ಕಾಲ ನಡೆಯುವ ಪರೀಕ್ಷೆ
 * ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭ ಹಾರೈಕೆ

Karnataka CM Yediyurappa Wishes To SSLC Students For exams rbj
Author
Bengaluru, First Published Jul 18, 2021, 8:09 PM IST

ಬೆಂಗಳೂರು, (ಜು.18): ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆ (ಜು.19) ಪ್ರಾರಂಭವಾಗಲಿದ್ದು,  ಪರೀಕ್ಷೆ ನಡೆಸಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸರ್ವ ಸನ್ನದ್ಧವಾಗಿದೆ.

ಕೊರೋನಾ ಭೀತಿಯ ನಡುವೆ ಪರೀಕ್ಷೆ ಬರೆಯುತ್ತಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟ್ವಟ್ಟರ್‌ ಮೂಲಕ ಶುಭ ಕೋರಿದ್ದಾರೆ. 

SSLC ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿ ಮಾಹಿತಿಗೆ ಎಸ್‌ಎಂಎಸ್‌..!

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ ಶುಭ ಹಾರೈಕೆಗಳು. ಎಲ್ಲರೂ ಶಾಂತಚಿತ್ತರಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಪಾಲಕರಿಗೆ ಭರವಸೆ ನೀಡುತ್ತೇನೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಈ ಬಾರಿ ಒಟ್ಟು 8 ಲಕ್ಷದ 76 ಸಾವಿರದ 581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 4 ಲಕ್ಷದ 72 ಸಾವಿರ 643 ಬಾಲಕರು,  4 ಲಕ್ಷದ 3 ಸಾವಿರದ 938 ಬಾಲಕೀಯರು ಪರೀಕ್ಷೆ ಬರೆಯಲಿದ್ದಾರೆ. 

ಪ್ರೆಶರ್ಸ್ ವಿದ್ಯಾರ್ಥಿಗಳು 7 ಲಕ್ಷದ 83 ಸಾವಿರದ 955 ವಿದ್ಯಾರ್ಥಿಗಳು. 977  ಪುನಾವರ್ತಿತ ವಿದ್ಯಾರ್ಥಿಗಳು.  21 ಸಾವಿರದ 817 ಖಾಸಗಿ  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ರಾಜ್ಯದಲ್ಲಿ ಒಟ್ಟು 4884 ಪರೀಕ್ಷಾ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದ್ದು, 1 ಲಕ್ಷದ 30 ಸಾವಿರ ಸಿಬ್ಬಂದಿಗಳನ್ನ ಪರೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಈ ಬಾರಿ  KPSC ಮಾದರಿಯಲ್ಲಿ ನಡೆಯಲಿದೆ SSLC ಪರೀಕ್ಷೆ ನಡೆಯಲಿದ್ದು,  40 ಅಂಕಗಳಿಗೆ ಮೂರು ಗಂಟೆ ಅವಧಿಯಲ್ಲಿ ಪರೀಕ್ಷೆ ನಡೆಯಲಿವೆ. 

Follow Us:
Download App:
  • android
  • ios