Asianet Suvarna News Asianet Suvarna News

'ಕಾಂತಾರ' ಪ್ರಭಾವ: ಕೋಲ ವೀಕ್ಷಿಸಿದ ನೂರಾರು ಎನ್‌ಐಟಿಕೆ ವಿದ್ಯಾರ್ಥಿಗಳು!

ಕಾಂತಾರ ಸಿನಿಮಾದ ಪ್ರಭಾವದಿಂದ ವಿದ್ಯಾರ್ಥಿಗಳು ಕೂಡ ಭಯ-ಭಕ್ತಿಯಿಂದ ದೈವದ ಕೋಲ, ನೇಮದತ್ತ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಸಾಲುಗಟ್ಟಿ ಕ್ಷೇತ್ರದ ನೇಮಕ್ಕೆ ಆಗಮಿಸಿ,ಕೋಲ ವೀಕ್ಷಿಸಿ ಒಂದಿಷ್ಟು ಫೋಟೋ, ವೀಡಿಯೋ ಮಾಡಿದ್ದಾರೆ. ಓದು, ಸುತ್ತಾಟವಷ್ಟೇ ಅಂತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೇಮದಲ್ಲಿ ಭಾಗವಹಿಸಿ ಕುತೂಹಲದಿಂದ ವೀಕ್ಷಿಸಿ ಭಕ್ತಿ ಭಾವದಿಂದ ದೈವಕ್ಕೆ ಶಿರಬಾಗಿ ನಮಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.

kantara effect hundreds of national institute of technlogy students watched kola rav
Author
First Published Jan 13, 2023, 10:35 AM IST

ಮಂಗಳೂರು (ಜ.13): ಕಾಂತಾರ ಸಿನಿಮಾದ ಪ್ರಭಾವದಿಂದ ವಿದ್ಯಾರ್ಥಿಗಳು ಕೂಡ ಭಯ-ಭಕ್ತಿಯಿಂದ ದೈವದ ಕೋಲ, ನೇಮದತ್ತ ಮುಖ ಮಾಡಿದ್ದಾರೆ. ಓದು, ಸುತ್ತಾಟವಷ್ಟೇ ಅಂತಿದ್ದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೇಮದಲ್ಲಿ ಭಾಗವಹಿಸಿ ಕುತೂಹಲದಿಂದ ವೀಕ್ಷಿಸಿ ಭಕ್ತಿ ಭಾವದಿಂದ ದೈವಕ್ಕೆ ಶಿರಬಾಗಿ ನಮಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ನಡೆದಿದೆ.

ಮಂಗಳೂರು(Mangaluru) ಹೊರವಲಯದ ಸುರತ್ಕಲ್(Suratkal) ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ(Shri Sadashiva Mahaganapati Temple)ದ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆದ ದೈವದ ನೇಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ವೀಕ್ಷಣೆ ಮಾಡಿದ್ದಾರೆ. 

ಕಾಂತಾರ ಎಫೆಕ್ಟ್: ದೈವವನ್ನೇ ಬಂಡವಾಳ ಮಾಡಿಕೊಂಡು ದಂಧೆ!

ದೇವಸ್ಥಾನದ ಸಂಪ್ರದಾಯದಂತೆ ಇಲ್ಲಿರುವ ದೈವಗಳು ದೇವರ ಭೇಟಿ ಮಾಡುವ ಕಾರ್ಯಕ್ರಮ ಜಾತ್ರೆ ಸಂದರ್ಭ ನಡೆಯುತ್ತದೆ. ಇದರ ಸಮೀಪದಲ್ಲಿರುವ ಎನ್‌ಐಟಿಕೆ ತಾಂತ್ರಿಕ ವಿದ್ಯಾಲಯ(NITK Surathkal)ಕ್ಕೆ ದೇಶ, ವಿದೇಶದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಸಹಜವಾಗಿ ಓದಿನ ಬಳಿಕ ಬೀಚ್, ಸುತ್ತಾಟ ಅಂತ ಇರೋ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಕಾಂತಾರ ಪ್ರಭಾವದಿಂದ ನೇಮಕ್ಕೆ ಬಂದಿದ್ದಾರೆ. 

ಎನ್‌ಐಟಿಕೆ ವಿದ್ಯಾರ್ಥಿಗಳು ಸಾಲುಗಟ್ಟಿ ಕ್ಷೇತ್ರದ ನೇಮಕ್ಕೆ ಆಗಮಿಸಿದ್ದು, ನೇಮಕ್ಕೆ ಆಗಮಿಸಿ ವೀಕ್ಷಿಸಿ ಒಂದಿಷ್ಟು ಫೋಟೋ, ವೀಡಿಯೋ ಮಾಡಿಕೊಂಡು ಹೋಗಿದ್ದಾರೆ. ದೈವಗಳ ಹಾವ ಭಾವ ಕಂಡು ಭಕ್ತಿಯಿಂದ ನೇಮ ವೀಕ್ಷಿಸಿದ ನೂರಾರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. 

Kantara Effect: ಭೂತಕೋಲ ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ ನಟ ವಿಶಾಲ್‌!

ಬೇರೆ ಭಾಗದ ವಿದ್ಯಾರ್ಥಿಗಳಿಗೆ ನೇಮದ ರೀತಿ ರಿವಾಜನ್ನು ವಿವರಿಸಿದ ಸ್ಥಳೀಯ ವಿದ್ಯಾರ್ಥಿಗಳು ಈ ಭಾಗದ ಆಚರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೈವದ ದರ್ಶನ ಸೇವೆಯನ್ನು ‌ಕಣ್ತುಂಬಿಕೊಂಡ ನೂರಾರು ವಿದ್ಯಾರ್ಥಿಗಳು ಭಕ್ತಿಯಿಂದ ಕೈ ಮುಗಿದು ತೆರಳಿದ್ದಾರೆ.

Follow Us:
Download App:
  • android
  • ios