Asianet Suvarna News Asianet Suvarna News

ಜೆಇಇ- ಅಡ್ವಾನ್ಸ್‌ ಪರೀಕ್ಷೆ ಫಲಿತಾಂಶ: ಕೋಶಿ, ಅಮೋಘ ರಾಜ್ಯಕ್ಕೆ ಟಾಪರ್

ಐಐಟಿಗಳು ಸೇರಿದಂತೆ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ 2024ನೇ ಸಾಲಿನ ಜೆಇಇ-ಅಡ್ವಾನ್ಸ್‌ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ. 

JEE Advance Exam Result Thomos Koshi and Amogha Agarwal State Toppers gvd
Author
First Published Jun 10, 2024, 12:58 PM IST

ಬೆಂಗಳೂರು (ಜೂ.10): ಐಐಟಿಗಳು ಸೇರಿದಂತೆ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ 2024ನೇ ಸಾಲಿನ ಜೆಇಇ-ಅಡ್ವಾನ್ಸ್‌ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಅಖಿಲ ಭಾರತ ಮಟ್ಟದಲ್ಲಿ 15ನೇ ಬ್ಯಾಂಕ್‌ ಪಡೆದಿರುವ ಷಾನ್ ಥಾಮಸ್ ಕೋಶಿ ಬೆಂಗಳೂರಿನ ಅಲೆನ್ ಕರಿಯರ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅದೇ ರೀತಿ ಕಸವನಹಳ್ಳಿಯ ನಾರಾಯಣ ಕಾಲೇಜಿನ ವಿದ್ಯಾರ್ಥಿ ಅಮೋಘ ಅಗರ್‌ವಾಲ್‌ ಅಖಿಲ ಭಾರತೀಯ ಮಟ್ಟದಲ್ಲಿ 20ನೇ ಬ್ಯಾಂಕ್ ಪಡೆದಿದ್ದು, ಇವರು ರಾಜ್ಯದ ಟಾಪರ್‌ಗಳು ಎನ್ನಲಾಗಿದೆ. 

ಟಾಪ್ 100 ಶ್ರೇಣಿಯಲ್ಲಿ ಅಲೆನ್ ಕರಿಯರ್‌ನ ಐದು ವಿದ್ಯಾರ್ಥಿಗಳು ಸೇರಿದ್ದಾರೆ. ಅಖಿಲ ಭಾರತೀಯ ಮಟ್ಟದಲ್ಲಿ ಷಾನ್ ಥಾಮಸ್ ಕೋಶಿ15, ವಿ.ಸಾಗರ್ 30, ವಿದೀಪ್ ರೆಡ್ಡಿ 36, ಆಂಶುಲ್ ಗೋಯಲ್ 37 ಮತ್ತು ಪಿ.ಜೆ.ಅಭಿನವ್ 80ನೇ ಬ್ಯಾಂಕ್ ಪಡೆದಿದ್ದಾರೆ. ಬೇಸ್‌ನಲ್ಲಿ ತರಬೇತಿ ಪಡೆದ ಎಂ.ಜೆ. ಅಭಯ್ ಸಿಂಹ 53 ನೇ ರಾಂಕ್ ಪಡೆದಿದ್ದಾನೆ. ಇದರ ಹೊರತಾಗಿ ರಾಜ್ಯದಿಂದ ಬಾಲಸತ್ಯ ಸರವಣ್ 362, ಎಸ್.ಪ್ರಣವ್ ರಿಥಿಲ್ 428, ಅರ್ಯನ್ ಚಕ್ರವರ್ತಿ 514, ಕುಶಾಲ್ ಲಕ್ಷ್ಯ ತಿವಾರಿ 570, ವರುಣ್ ಬಾತ್ರ 567, ಅನಿಶ್ 635, ಎಂ.ವಿ.ವಿನಲ್ ರೆಡ್ಡಿ 709, ಅವಿಷಾ 798, ಜಿ.ಅಮೃತ್ 985 ನೇ ಬ್ಯಾಂಕ್ ಪಡೆದಿದ್ದಾರೆ.

ವಾಟ್ಸಾಪ್‌ನಲ್ಲಿ 'ಡಿಯರ್' ಮೆಸೇಜ್: ಪ್ರಶ್ನಿಸಿದಕ್ಕೆ ಮನೆಯಿಂದ ಪತ್ನಿ ನಾಪತ್ತೆ!

ಪ್ರಜ್ವಲ್‌ ರಾಷ್ಟ್ರಮಟ್ಟದಲ್ಲಿ 387ನೇ ರ‍್ಯಾಂಕ್‌: 024ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)-ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ ಪಡೆಯುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ಪ್ರಜ್ವಲ ವಿಜಯಕುಮಾರ ನಾರಾ ಸಾಮಾನ್ಯ ವರ್ಗದಡಿ ರಾಷ್ಟ್ರಮಟ್ಟದಲ್ಲಿ 387ನೇ ರ‍್ಯಾಂಕ್‌ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾನೆ. ಪಿಡಬ್ಲ್ಯುಡಿ ಕೋಟಾದಡಿ ಗಣೇಶ ಮಧುಕರ ಶಿಂಧೆ 4ನೇ ಮತ್ತು ಅಭಿಷೇಕ ಅಮೃತ 24ನೇ ರ‍್ಯಾಂಕ್‌ ಪಡೆದು ಕಾಲೇಜಿನ ಕೀರ್ತಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಇನ್ನುಳಿದಂತೆ ವಿಕಾಸ ಶಿವರಾಜ 113, ರೋಹಿತ ದಿನೇಶ ಮೋರೆ 123, ಅಭಿಷೇಕ ಶಿವಾಜಿ ಸುಂಧಾಳಕರ್‌ 177, ಧನರಾಜ ಮೊಗಲಪ್ಪ 572, ಮಾನಸಾ ಸಾಯಪ್ಪ 786, ಮಲ್ಲಿಕಾರ್ಜುನ ಲಕ್ಷ್ಮಣ 839, ಸಂದೀಪ ಸಂಜೀವಕುಮಾರ 1053, ಪ್ರಜ್ವಲ ಕುಪೇಂದ್ರ 1282, ಕಿರಣಕುಮಾರ ರಾಜೇಂದ್ರ ಖಂಡು 1591, ರವಿಚಂದ್ರ ಶ್ರೀನಿವಾಸ ಭೂರೆ 1743, ಶರಣಬಸವ ಶೇಷಪ್ಪ ಬಿರಾದಾರ್ 1853, ಪುರುಷೋತ್ತಮಕುಮಾರ ಸಂತೋಷಕುಮಾರ 2086, ಶಿವಾನಂದ ನಾಮದೇವ 2144, ಪಂಕಜ ಸಂಜಯಕುಮಾರ ಭೋಸ್ಲೆ 2243, ಸುದೀಪ ಸಂತೋಷ 2853, ಶೈಲಜಾ ಪ್ರಕಾಶ ಚಂಗಟ್ಕೇರ್ 2885, ಸಾಯಿಕುಮಾರ ರಾಜಕುಮಾರ 2930, ಅಭಿಷೇಕ ಬಸವರಾಜ ಲಕೋಟೆ 2969, ಶ್ರೀನಿವಾಸ ಕುಮಾರ ರಾಠೋಡ್ 3629.

ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ಭರ್ಜರಿ ಲಾಭ: ಎಚ್‌.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ

ಸಂದೇಶರೆಡ್ಡಿ ನಾಗರೆಡ್ಡಿ ಗಡ್ಡೆ 4059, ಸಾಯಿಪ್ರಿಯಾ ಲಿಂಗಾನಂದ ಸ್ವಾಮಿ 4153, ಪುಟ್ಪಕ ವೆಂಕಟಸಾಯಿ ನರೇಂದ್ರ ಗೌಡ 4752, ಸಂತೋಷಿ ಸಂಜೀವಕುಮಾರ 4913, ವಿನಾಯಕ ರಾಜಕುಮಾರ ಕೊಂಡಾಸಾರೆ 5112, ಸ್ವರಾಜ ರಾಜಶೇಖರ ಟೋಕರೆ 5369, ಸಚಿನ ಅಂಬಾದಾಸ ಕಾಂಬಳೆ 6038, ಮೋಹಿತಕಾಶಿ ಮನೋಹ 6182, ಭೂಮಿಕ ಕೃಷ್ಣಾಜೀ 6308, ಸೃಜನ ಮಾನಪ್ಪ 6808, ಕೃಷ್ಣ ತುಕಾರಾಮ 6821, ಸಿದ್ದಲಿಂಗ ಸತೀಶಕುಮಾರ ಮೋರೆ 6928, ಸನತ್ ಹೆಚ್ ಶರಣಪ್ಪ 14055, ಸಾರ್ಥಕ ಅನಿಲಕುಮಾರ 18995, ಅಖಿಲೇಶ ರಮೇಶ ವಡ್ಡೆ 20918, ಪ್ರಭುಗೌಡ ಶರಣಗೌಡ ಪಾಟೀಲ್ 24896ನೇ ರ‍್ಯಾಂಕ್ ಪಡೆದು ಕೊಂಡಿದ್ದಾರೆ.

Latest Videos
Follow Us:
Download App:
  • android
  • ios