ಕಲಬುರಗಿ: ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳಿಗೆ ಕಾಡುತ್ತಿದೆ ನೀರಿನ ಬರ..!
ನೀರಿನ ಅಗತ್ಯತೆಯನ್ನು ಪಕ್ಕದ ಹೊಲದ ಬೋರ್‌ವೆಲ್‌ನಿಂದ ಪೂರೈಸಲಾಗುತ್ತಿದೆ. ನೀರಿನ ಸವಲತ್ತಿಲ್ಲದೆ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಜೊತೆಗೇ ಆಟದ ಮೈದಾನವೂ ಇಲ್ಲಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಕಲಬುರಗಿ/ಯಡ್ರಾಮಿ(ಡಿ.20): ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದಲ್ಲಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕುಡಿವ ನೀರಿನ ಜಲಮೂಲ ಸೇರಿ ಹಲವು ಮೂಲ ಸವಲತ್ತಿಗೆ ಬರ ಎದುರಾಗಿದೆ. ಇದರಿಂದಾಗಿ ಇಲ್ಲಿನ 180 ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡಲಾರಂಭಿಸಿ 6 ತಿಂಗಳಾದರೂ ಕೇಳೋರಿಲ್ಲದಂತಾಗಿದೆ ಎಂದು ಮಕ್ಕಳು ಗೋಳಾಡುತ್ತಿದ್ದಾರೆ. ಇದು ಇಂದಿರಾಗಾಂಧಿ ವಸತಿ ಶಾಲೆಯ ದುಸ್ಥಿತಿಗೆ ಹಿಡಿದ ಕನ್ನಡಿ. ಶಿಕ್ಷಣ ಸಚಿವರೇ ಇಲ್ಲಿ ನೋಡಿ ನಮ್ಮ ಗೋಳು ಎಂದು ವಿದ್ಯಾರ್ಥಿಗಳು, ಹಾಗೂ ಮಕ್ಕಳ ಪೋಷಕರು ಅಳವತ್ತುಕೊಳ್ಳುತ್ತಿದ್ದಾರೆ.
ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ?: ಸಚಿವ ಪ್ರಿಯಾಂಕ ಖರ್ಗೆ
ಸುಂಬಡ ಶಾಲೆಯಲ್ಲಿ ಕೊಠಡಿ, ಅಧ್ಯಾಪಕ ಹೊರತುಪಡಿಸಿ ಉಳಿದೆಲ್ಲವೂ ಖಾಲಿ! ಕನಿಷ್ಠ ಮೂಲಭೂತ ಸೌಲಭ್ಯ ಕೂಡ ಈ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹೊಂದಿಲ್ಲ ಯಾಕೆ ಎಂಬುದೇ ಸೋಜಿಗವಾಗಿದೆ. ಶಾಲೆಯಲ್ಲಿ ಇರುವ 180 ಮಕ್ಕಳಿಗೆ ಒಂದೇ ಬೋರ್ ವೆಲ್ ಇದ್ದು, ಆರು ತಿಂಗಳದ ಹಿಂದೆ ಕೆಟ್ಟು ಹೋಗಿದ್ದು, ಶುದ್ಧೀಕರಿಸಿದ ನೀರಿಲ್ಲದೆ ಪದೇ ಪದೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ವಿದ್ಯಾರ್ಥಿಗಳ ಗೋಳು ಕೇಳೋರೂ ಇಲ್ಲವಾಗಿದೆ.
ಅಮಿತ್ ಶಾ ಅಸಮರ್ಥ ಹೋಂ ಮಿನಿಸ್ಟರ್: ಸಚಿವ ಪ್ರಿಯಾಂಕ್ ಖರ್ಗೆ
ನೀರಿನ ಅಗತ್ಯತೆಯನ್ನು ಪಕ್ಕದ ಹೊಲದ ಬೋರ್‌ವೆಲ್‌ನಿಂದ ಪೂರೈಸಲಾಗುತ್ತಿದೆ. ನೀರಿನ ಸವಲತ್ತಿಲ್ಲದೆ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಜೊತೆಗೇ ಆಟದ ಮೈದಾನವೂ ಇಲ್ಲಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆ, ಅಧಿಕಾರಿಗಳ ಬೇಜವಾಬ್ಧಾರಿತನಕ್ಕೆ ಮಕ್ಕಳು ಸೊರಗುತ್ತಿದ್ದಾರೆ. ಗ್ರಾಪಂ ಪಿಡಿಒ ಹಾಗೂ ತಾಲೂಕು ಪಂಚಾಯತ್ ಗಮನಕ್ಕೂ ತಂದರು ಏನೂ ಪ್ರಯೋಜನವಾಗಿಲ್ಲ. ಶಿಕ್ಷಣ ಸಚಿವರು ಇತ್ತ ಗಮನಹರಿಸಿ ತಕ್ಷಣವೇ ವಸತಿ ಶಾಲೆಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
ನಮಗೆ ನೀರಿಲ್ಲದೆ ಸರಿಸುಮಾರು ಆರು ತಿಂಗಳ ಆಗಿದೆ. ನಾವು ಸ್ನಾನ ಮಾಡದೆ ತರಗತಿಗೆ ತೆರಳುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೆಸರು ಹೇಳಲು ಇಚ್ಚಿಸದ 6ನೇ ತರಗತಿಯ ವಿದ್ಯಾರ್ಥಿ ತಿಳಿಸಿದ್ದಾರೆ.