ಗುಲಬರ್ಗಾ ವಿಶ್ವವಿದ್ಯಾಲಯದ ವೀಕೆಂಡ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ರದ್ದು

* ಗುಲಬರ್ಗಾ ವಿಶ್ವವಿದ್ಯಾಲಯದ ವಾರಾಂತ್ಯ ನಡೆಯಬೇಕಿದ್ದ ಪರೀಕ್ಷೆಗಳು ರದ್ದು
* ವೀಕೆಂಡ್ ಕರ್ಪ್ಯೂ ಜಾರಿ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು
* ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ ಆದೇಶ

Gulbarga University Exams cancelled Over Covid Weekend Curfew rbj

ಕಲಬುರಗಿ, (ಆ.06): ಕೊರೊನಾ ನಿಯಂತ್ರಣಕ್ಕಾಗಿ ಗಡಿ ಜಿಲ್ಲೆಗಳಲ್ಲಿ ಇಂದಿನಿಂದಲೇ (ಆ.06) ವೀಕೆಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಾರಾಂತ್ಯಗಳಂದು ನಡೆಯಬೇಖಿದ್ದ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. 

ರಾಜ್ಯದಲ್ಲಿ ನೈಟ್, ವೀಕೆಂಡ್‌ ಕರ್ಫ್ಯೂ ಜಾರಿ: ಇಲ್ಲಿದೆ ಹೊಸ ಮಾರ್ಗಸೂಚಿ

ವಾರಾಂತ್ಯ ಕರ್ಫ್ಯೂ ಇರುವ ಕಾರಣ ಆಗಸ್ಟ್ 7 ಮತ್ತು 8 ಜೊತೆಗೆ 14 ರಂದು ನಡೆಯುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಪರೀಕ್ಷೆ ರದ್ದು ಮಾಡಿ ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ ಇಂದು (ಆ.06)  ಆದೇಶ ಹೊರಡಿಸಿದ್ದಾರೆ.

 ರದ್ದುಗೊಂಡ ವಾರಾಂತ್ಯ ಪರೀಕ್ಷೆಯ ದಿನಾಂಕಗಳನ್ನು ಆಗಸ್ಟ್ 27 ರ ನಂತರ ವಿಶ್ವವಿದ್ಯಾಲಯ ಪ್ರಕಟಿಸಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ಗಡಿಭಾಗದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಸಹ ಮಹಾರಾಷ್ಟ್ರದ ಗಡಿಜಿಲ್ಲೆಯಲ್ಲಿರುವುದರಿಂದ ವೀಕೆಂಟ್ ಕರ್ಫ್ಯೂ ಇರಲಿದೆ. ಆದ್ದರಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Latest Videos
Follow Us:
Download App:
  • android
  • ios