ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ?: ಯುವನಿಧಿ ಹಣವನ್ನು, ಶುಲ್ಕದ ಮೂಲಕ ವಸೂಲಿ ಮಾಡ್ತಿದೆಯೇ ಗ್ಯಾರಂಟಿ ಸರ್ಕಾರ!

ರಾಜ್ಯದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಹಣವನ್ನು ಶುಲ್ಕ ಏರಿಕೆ ಮೂಲಕ ವಸೂಲಿ ಮಾಡಲು ಮುಂದಾಗಿದೆ.

Graduation fee increase Karnataka govt yuva nidhi scheme money collected through fees hike sat

ಬೆಂಗಳೂರು (ಜ.03): ರಾಜ್ಯದಲ್ಲಿ ನಿರುದ್ಯೋಗಿ ಪದವೀಧರ ಯುವಕರಿಗೆ ಯುವನಿಧಿ ಮೂಲಕ 1,500 ರೂ. ಭತ್ಯೆ ಕೊಡಲು ಮುಂದಾಗಿರುವ ಗ್ಯಾರಂಟಿ ಸರ್ಕಾರ, ಯುವನಿಧಿ ಜಾರಿಗೆ ಬರುವ ಮುನ್ನವೇ ಪದವಿ ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ಶಾಕ್‌ ನಿಡಿದೆ. ಯುವನಿಧಿಗೆ ಕೊಡಬೇಕಾದ ಹಣವನ್ನು ವಿದ್ಯಾರ್ಥಿಗಳಿಂದಲೇ ವಸೂಲಿ ಮಾಡಲು ಯೋಜನೆ ರೂಪಿಸಿಕೊಂಡಂತಿದೆ.

ಹೌದು, ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲ 'ಪದವಿ' ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಶುಲ್ಕ ಹೆಚ್ಚಳ ಮಾಡುವ ಮೂಲಕ ಬಡ ಪದವಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊರೆಯನ್ನು ನೀಡಲು ಮುಂದಾಗಿದೆ. ಅಂದರೆ, ಈಗಿರುವ ವಿದ್ಯಾರ್ಥಿಗಳ ಪದವಿ ಕೋರ್ಸ್ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಲು ತೀರ್ಮಾನಿಸಿದೆ. ಪದವಿ ವಿದ್ಯಾರ್ಥಿಗಳ ಶುಲ್ಕ ಶೇ 10 ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಸಧ್ಯದಲ್ಲೇ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸುವ ಸಾಧ್ಯತೆಯಿದೆ.

ನದಿ ರಕ್ಷಣೆಗೆ ವರದಿ ಬರೆದು ಬಾಲ ವಿಜ್ಞಾನಿಯಾದ 13 ವರ್ಷದ ಪೋರಿ!

ಬಿಎ, ಬಿಕಾಂ, ಬಿಎಸ್ಸಿ, ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಎಲ್ಲ ಪದವಿ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲು ಸೂಚನೆ ನೀಡಲಿದೆ. ಈವರೆಗೆ 2023-24ನೇ ಶೈಕ್ಷನಿಕ ಸಾಲಿನಲ್ಲಿದ್ದ ಶುಲಕ್ಕವನ್ನು 2024-25ನೇ ಸಾಲಿಗೆ ಅನ್ವಯವಾಗುವಂತೆ ಶೇ 10ರಷ್ಟು ಏರಿಕೆ ಮಾಡಲಾಗುತ್ತಿದೆ. ಪರಿಷ್ಕೃತ ಶುಲ್ಕ ಪಟ್ಟಿಯನ್ನ ಯೂನಿವರ್ಸಿಟಿಗಳಿಗೆ ನೀಡಿದ ಸರ್ಕಾರ ಹೊಸ ಶುಲ್ಕ ವಸೂಲಿಗೆ ಸೂಚನೆಯನ್ನೂ ನೀಡಲಾಗುತ್ತಿದೆ. 

ಇನ್ನು ರಾಜ್ಯಾದ್ಯಂತ ವಿಶ್ವವಿದ್ಯಾಲಯದಲ್ಲಿ ಆದಾಯದ ಕೊರತೆ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಶುಲ್ಕ ಹೆಚ್ಚಳ ಮಾಡುವ ನಿರ್ಧಾರದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ‌ಮಾಹಿತಿ ಲಭ್ಯವಾಗಿದೆ.

ನಮ್ಮ ದೇಶ ಹಿಂದೂ ರಾಷ್ಟ್ರವಾದರೆ, ಪಾಕಿಸ್ತಾನ-ಅಪಘಾನಿಸ್ತಾನದಂತೆ ದಿವಾಳಿಯಾಗಲಿದೆ: ಯತೀಂದ್ರ ಸಿದ್ದರಾಮಯ್ಯ

ಏಕರೂಪ ಶುಲ್ಕ ಸಮಿತಿಯ 2022/23ರ ಅನ್ವಯ ಶುಲ್ಕ 
BA - 11,700
BA specialization - 16,200
BSW - 16,400
B.Com - 19,700
B.Com specialization - 24,700
BBA - 28,700
BBA - specialization - 31,700
B.Sc - 21,790
B.Sc specialization - 25,700
BCA -30,700
B.Ed - 12,750
BO.Ed - 42,750
BA LLB - 27,750
MA - 15,250
MVA - 17,250
MSW - 21,250
MA (MCJ) - 21,750
MA (Foreign Lang) - 23,250
M.Com  -19,750
M.Com specialization -64,750
MTTM - 67,750
MBA (D)59,750
MBA (E)79,750

Non- Karnataka and NRI students
BA - 12,000
BSc specialization - 12,000
BSW 12,000

Latest Videos
Follow Us:
Download App:
  • android
  • ios