'ಇನ್ನೂ ಒಂದು ತಿಂಗಳು ರಾಜ್ಯದಲ್ಲಿ ಶಾಲೆ ತೆರೆಯಲ್ಲ'

ಕೊರೋನಾತಂಕ ದಿನದಿನಕ್ಕೂ ಹೆಚ್ಚುತ್ತಲೆ ಇದೆ. ಪ್ರತೀ ದಿನವೂ ಸಾವಿರಾರು  ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ನಡುವೆ ಶಾಲೆ ತೆರೆಯುವ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಚರ್ಚೆಗಳಾಗುತ್ತಿದೆ

Govt of Karnataka  Health Family Welfare Department  Director Patil Om Prakash Speaks About School Open snr

ಬೆಂಗಳೂರು (ಅ.07):  ರಾಜ್ಯದಲ್ಲಿ ಕೊರೋನಾತಂಕ ದಿನದಿನಕ್ಕೂ ಹೆಚ್ಚುತ್ತಲೆ ಇದೆ. ಪ್ರತೀ ದಿನವೂ ಸಾವಿರಾರು  ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. 

ಇದರ ನಡುವೆ ಶಾಲೆ ತೆರೆಯುವ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಚರ್ಚೆಗಳಾಗುತಿದ್ದು,  ಕನಿಷ್ಟ ಇನ್ನೂ ಒಂದು ತಿಂಗಳು ಶಾಲೆ ತೆರೆಯುವುದಿಲ್ಲ ಎಂದು ಡಾ. ಪಾಟೀಲ್ ಓಂ ಪ್ರಕಾಶ್ ಹೇಳಿದ್ದಾರೆ. 

ತಜ್ಞರೊಂದಿಗಿನ ಶ್ರೀರಾಮುಲು ಸಭೆ ಅಂತ್ಯ: ಶಾಲಾ-ಕಾಲೇಜು ಪ್ರಾರಂಭ ಯಾವಾಗ..?

ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಕನಿಷ್ಠ ಒಂದು ತಿಂಗಳವರೆಗೆ ತೆರೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಶಾಲೆ ತೆರೆಯಲು ಪರವಾನಿಗೆ ನೀಡಿದೆ. ಆದರೆ ರಾಜ್ಯದಲ್ಲಿ ಶಾಲೆ ತೆರೆಯುವ ಸ್ಥಿತಿ ಇಲ್ಲ ಎಂದಿದ್ದಾರೆ. 

ಆದ್ರೆ ಪರಿಸ್ಥಿತಿ ಅವಲೋಕನೆ ಮಾಡಿ ಮುಂದಿನ‌ ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ ಪಾಟೀಲ್ ಓಂಪ್ರಕಾಶ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios