Asianet Suvarna News Asianet Suvarna News

ಮಕ್ಕಳ ಆತಂಕಕ್ಕೆ ಪರೀಕ್ಷೆ, ಫಲಿತಾಂಶ ಕಾರಣ: ಎನ್‌ಸಿಇಆರ್‌ಟಿ ಅಧ್ಯಯನ

ಮಕ್ಕಳ ಆತಂಕಕ್ಕೆ ಪರೀಕ್ಷೆ, ಅಭ್ಯಾಸ, ಫಲಿತಾಂಶ ಕಾರಣ.ಶೇ.81 ಮಕ್ಕಳಿಗೆ ಪರೀಕ್ಷೆ ಎಂದರೆ ಭಯ. ಶೇ.29 ಮಕ್ಕಳಿಗೆ ಏಕಾಗ್ರತೆ ಇರುವುದಿಲ್ಲ. ಶೇ.51 ಮಕ್ಕಳಿಗೆ ಆನ್‌ಲೈನ್‌ ತರಗತಿ ಎಂದರೆ ಕಷ್ಟ: ಎನ್‌ಸಿಇಆರ್‌ಟಿ ಅಧ್ಯಯನ

Exams results major cause of anxiety  source for Indian students  NCERT survey gow
Author
First Published Sep 8, 2022, 6:27 PM IST

ನವದೆಹಲಿ (ಸೆ.8): ಪರೀಕ್ಷೆ, ಅಭ್ಯಾಸ ಹಾಗೂ ಫಲಿತಾಂಶ- ಈ ಮೂರೂ ವಿಷಯಗಳು ಶಾಲಾ ಮಕ್ಕಳ ಆತಂಕಕ್ಕೆ ಅಥವಾ ತಳಮಳಕ್ಕೆ ಪ್ರಮುಖ ಕಾರಣ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಅಧ್ಯಯನದಲ್ಲಿ ತಿಳಿದುಬಂದಿದೆ. ಇದಲ್ಲದೆ ಶೇ.33 ವಿದ್ಯಾರ್ಥಿಗಳು ಸ್ನೇಹಿತರ ಪ್ರಭಾವಕ್ಕೆ ಒಳಗಾಗಿ, ಅವರು ಮಾಡುವುದನ್ನೇ ಮಾಡಲು ಯತ್ನಿಸುತ್ತಾರೆ ಎಂದೂ ಅಧ್ಯಯನ ಹೇಳಿದೆ. ದೇಶದ 36 ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶಗಳಲ್ಲಿ ಜನವರಿಯಿಂದ ಮಾಚ್‌ರ್‍ವರೆಗೆ 3.79 ಲಕ್ಷ ಮಕ್ಕಳನ್ನು ಸಂದರ್ಶಿಸಿ ಎನ್‌ಸಿಇಆರ್‌ಟಿ ಅಧ್ಯಯನ ವರದಿ ಸಿದ್ಧಪಡಿಸಿದೆ. ಇದರಲ್ಲಿ ಶೇ.73ರಷ್ಟುಮಕ್ಕಳು ಶಾಲಾ ಜೀವನದಿಂದ ನಾವು ತೃಪ್ತರಾಗಿದ್ದೇವೆ ಎಂದಿದ್ದಾರೆ. ಶೇ.29ರಷ್ಟುಮಕ್ಕಳಿಗೆ ಶಾಲೆಯಲ್ಲಿ ಏಕಾಗ್ರತೆ ಇರುವುದಿಲ್ಲ. ಇನ್ನು 6ರಿಂದ 12ನೇ ತರಗತಿಯ ಶೇ.43 ಮಕ್ಕಳಿಗೆ ಮೂಡ್‌ ಆಗಾಗ ಬದಲಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಮಕ್ಕಳು ಹೊರಳುತ್ತಿರುವ ಸಂದರ್ಭದಲ್ಲಿ ಅವರ ವೈಯಕ್ತಿಕ ಹಾಗೂ ಶಾಲಾ ಜೀವನದಲ್ಲಿ ಅತೃಪ್ತಿ ಮೂಡುವುದು ಕಂಡುಬರುತ್ತಿದೆ. ಏಕೆಂದರೆ ಪ್ರೌಢಶಾಲೆಗೆ ಹೋಗುವಾಗ ಹೊಸ ಸವಾಲುಗಳು ಎದುರಾಗುತ್ತವೆ. ಬೋರ್ಡ್‌ ಪರೀಕ್ಷೆಯ ಭೂತ, ಫಲಿತಾಂಶ , ಅಧ್ಯಯನ ಹಾಗೂ ತಮಗಿಂತ ಹಿರಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅಡ್ಮಿಷನ್‌ ಪಡೆಯಲು ಪಟ್ಟಯಾತನೆ- ಆ ಮಕ್ಕಳ ಕಣ್ಣ ಮುಂದೆ ಬರುತ್ತದೆ.

ಹೀಗಾಗಿ ಶೇ.81ರಷ್ಟುಮಕ್ಕಳು ಸಹಜವಾಗಿಯೇ ಈ ವಯಸ್ಸಿನಲ್ಲಿ ಆತಂಕಕ್ಕೆ ಈಡಾಗುವುದು ಗೊತ್ತಾಗಿದೆ. ಎಂದು ಅಧ್ಯಯನ ವರದಿ ವಿವರಿಸಿದೆ. ಮಾಧ್ಯಮಿಕ ತರಗತಿಗಳಲ್ಲಿ ಶೇ.43 ಮಕ್ಕಳು ಬದಲಾವಣೆಗೆ ಹೊಂದಿಕೊಳ್ಳುತ್ತೇವೆ ಎಂದಿದ್ದರೆ ಪ್ರೌಢ ಶಿಕ್ಷಣದಲ್ಲಿ ಶೇ.41 ಮಕ್ಕಳು ಮಾತ್ರ ಬದಲಾವಣೆಗೆ ಹೊಂದಾಣಿಕೆ ಆಗುವ ಹೇಳಿಕೆ ನೀಡಿದ್ದಾರೆ.

ಶೇ.51 ಮಕ್ಕಳು ಆನ್‌ಲೈನ್‌ ತರಗತಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ಶೇ.26 ಮಕ್ಕಳು ಶಿಕ್ಷಕರಿಗೆ ಪ್ರಶ್ನೆ ಕೇಳಲು ಅಳುಕು ಆಗುತ್ತದೆ ಎಂದಿದ್ದಾರೆ.

ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯ ಆರಂಭ: ಶಿಕ್ಷಣ ಇಲಾಖೆ ಆದೇಶ

ಸಾಕ್ಷ್ಯ ನೀಡಲು ಕ್ಯಾಮ್ಸ್‌ಗೆ ಸೂಚನೆ
ಬೆಂಗಳೂರು: ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಸಂಬಂಧ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕ್ಯಾಮ್ಸ್‌ ಸಂಘಟನೆಗೆ ಕೋರಿದ್ದಾರೆ. ಆರೋಪ ಮಾಡಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಅವರಿಗೆ ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸೆ.9ರಂದು ತಮ್ಮ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಆಯುಕ್ತ ಡಾ.ವಿಶಾಲ್‌ ಪತ್ರ ಬರೆದಿದ್ದಾರೆ.

Bengaluru: ಸಿಲಿಕಾನ್‌ ಸಿಟಿಯಲ್ಲಿ 51 ಅನಧಿಕೃತ ಖಾಸಗಿ ಶಾಲೆಗಳು?

ಇಲಾಖೆಗೆ ತಾವು ನೀಡಿರುವ ಎಲ್ಲ ಮನವಿಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಇಲಾಖೆಯ ಹಾಗೂ ಸಚಿವಾಲಯದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದೀರಿ. ಈ ಆರೋಪವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸೆ.9ರ ಬೆಳಗ್ಗೆ 11 ಗಂಟೆಗೆ ತಮಗೆ ಅವಕಾಶ ನೀಡಿದ್ದು ಹಾಜರಾಗಿ ದಾಖಲೆ ಸಲ್ಲಿಸಿ ಎಂದು ಸೂಚಿಸಿದ್ದಾರೆ. ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮತ್ತೊಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಅಧ್ಯಕ್ಷರಿಗೂ ಇದೇ ರೀತಿ ಸೂಚನೆ ನೀಡಿ ಈಗಾಗಲೇ ಆಯುಕ್ತರು ದಾಖಲೆಗಳನ್ನು ಪಡೆದಿದ್ದರು.

Follow Us:
Download App:
  • android
  • ios