ಜೀವಶಾಸ್ತ್ರ ಓದದವರೂ ಇನ್ಮೇಲೆ ಆಗ್ಬಹುದು ಡಾಕ್ಟರ್: ನೀಟ್ ಪರೀಕ್ಷೆ ಮಾನದಂಡ ಬದಲಿಸಿದ ಎನ್‌ಎಂಸಿ
ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡಲು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಪರೀಕ್ಷೆಗೆ ಹಾಜರಾಗಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾನದಂಡಗಳನ್ನು ಬದಲಾಯಿಸಿದ್ದು, ಜೀವಶಾಸ್ತ್ರವನ್ನು ಮುಖ್ಯ ವಿಷಯವಾಗಿ ವ್ಯಾಸಂಗ ಮಾಡಿಲ್ಲದ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ನವದೆಹಲಿ: ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡಲು ಪ್ರವೇಶ ಪರೀಕ್ಷೆಯಾಗಿರುವ ನೀಟ್ ಪರೀಕ್ಷೆಗೆ ಹಾಜರಾಗಲು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾನದಂಡಗಳನ್ನು ಬದಲಾಯಿಸಿದ್ದು, ಜೀವಶಾಸ್ತ್ರವನ್ನು ಮುಖ್ಯ ವಿಷಯವಾಗಿ ವ್ಯಾಸಂಗ ಮಾಡಿಲ್ಲದ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಈ ಆದೇಶವು 2024ರ ನೀಟ್ ಪರೀಕ್ಷೆಯಿಂದ ಜಾರಿಗೆ ಬರಲಿದೆ. ಅದರನ್ವಯ 12ನೇ ತರಗತಿಯಲ್ಲಿ (ಪಿಯುಸಿ-2) ಅಥವಾ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನದ ಪೈಕಿ ಕನಿಷ್ಠ ಒಂದು ವಿಷಯವನ್ನು ಐಚ್ಛಿಕವಾಗಿ ವ್ಯಾಸಂಗ ಮಾಡಿದವರೆಲ್ಲರಿಗೂ ನೀಟ್ ಪರೀಕ್ಷೆಗೆ (National medical entrance examination) ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಅರ್ಥಾತ್ ಜೀವಶಾಸ್ತ್ರ ಓದದೇ ಕೇವಲ ಪಿಸಿಎಂ ತೆಗೆದುಕೊಂಡವರೂ ಎಂಬಿಬಿಎಸ್‌ಗೆ ಅವಕಾಶ ಸಿಗಲಿದೆ.
ವೈದ್ಯರಾಗುವ ವಿದ್ಯಾರ್ಥಿಗಳೇ ಎಚ್ಚರ: ಬೆಂಗಳೂರಲ್ಲಿ ನಡೆಯುತ್ತಿದೆ ಮೆಡಿಕಲ್ ಸೀಟ್ ದೋಖಾ!
ಈ ಮೂಲಕ ನೂತನ ಶಿಕ್ಷಣ ನೀತಿಯ (new education policy) ಮೂಲ ಆಶಯವಾದ ಪಠ್ಯವಿಷಯದಲ್ಲಿ ಮುಕ್ತ ಸ್ವಾತಂತ್ರ್ಯ ಹೊಂದುವಿಕೆಯನ್ನು ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ ದಿಟ್ಟ ಹೆಜ್ಜೆ ಇಟ್ಟಂತಾಗಿದೆ. ಈವರೆಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಯು ಜೀವಶಾಸ್ತ್ರ ವಿಷಯವನ್ನು 12 ನೇ ತರಗತಿಯಲ್ಲಿ ಕಡ್ಡಾಯವಾಗಿ ಪೂರ್ಣಾವಧಿ ವಿಷಯವಾಗಿ ವ್ಯಾಸಂಗ ಮಾಡುವ ಜೊತೆಗೆ ಅದರಲ್ಲಿ ಪ್ರಾಯೋಗಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕಿತ್ತು.
27 ಲಕ್ಷ ಸಾಲದ ಹೊರೆ, ಕೇವಲ 500 ರೂ ನಲ್ಲೇ ಜೀವನ, ನೀಟ್ ಬರೆದು ಮೆಡಿಕಲ್ ಪ್ರವೇಶ ಪಡೆದ ಗಟ್ಟಿಗಿತ್ತಿ ಹೆಣ್ಣು
ಪ್ರತಿಭಾವಂತ ಬಡ ವಿದ್ಯಾರ್ಥಿ ಅಲ್ಪೇಶ್ ವೈದ್ಯಕೀಯ ಕಾಲೇಜು ಪ್ರವೇಶ ಜಾತಿ ಪ್ರಮಾಣಪತ್ರದಿಂದಾಗಿ ರದ್ದು!