ಧಾರವಾಡ, (ಸೆ.26): ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಕೆ ಬಿ ಗುಡಸಿ ಅವರು ನೇಮಕಗೊಂಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕಾಯಂ ಕುಲಪತಿ ಆಗಿ ರಸಾಯನಶಾಸ್ತ್ರ ವಿಭಾಗದ ಡಾ.ಕೆ.ಬಿ. ಗುಡಸಿ ಅವರನ್ನು ನೇಮಿಸಿ ರಾಜ್ಯಪಾಲರು ಇಂದು (ಶನಿವಾರ) ಆದೇಶ ಹೊರಡಿಸಿದ್ದಾರೆ.

ಭೂಸುಧಾರಣೆ ವಿಧೇಯಕ ಅಂಗೀಕಾರ, ಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ವಿಚಾರ; ಸೆ.26ರ ಟಾಪ್ 10 ಸುದ್ದಿ!

 ಪ್ರೊ.ಕೆ.ಬಿ ಗುಡಸಿ ಕರ್ನಾಟಕ ವಿವಿಯ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.  ನೇಮಕಾತಿ ಆದೇಶ ಪ್ರಕಟವಾಗುತ್ತಿದ್ದಂತೆಯೇ ಪ್ರಭಾರಿ ಕುಲಪತಿ ಪ್ರೊ.ಎಂ ವಿಶ್ವನಾಥ ಅವರಿಂದ ಪ್ರೊ.ಕೆ ಬಿ ಗುಡಸಿ ಅಧಿಕಾರ ಸ್ವೀಕಾರ ಮಾಡಿದರು.

ಇಷ್ಟು ದಿನ ಕರ್ನಾಟಕ ವಿವಿಗೆ ಖಾಯಂ ಕುಲಪತಿಗಳೇ ಇರಲಿಲಲ್ಲ. ಇದರಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ  ಸ್ನಾತಕೋತ್ತರ ಸಹಾಯಕ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಒಕ್ಕೂಟದ ಪರವಾಗಿ ಬುಧವಾರ ಜಿಲ್ಲಾಧಿಕಾರಿ ಎಂ.ದೀಪಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.