Karnataka SSLC Exam 2022 Result: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಕ್ಷಣಗಣನೆ
ಮೇ 19ರಂದು ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಯಾರಿ ಮಾಡಿಕೊಂಡಿದೆ.
ಬೆಂಗಳೂರು(ಮೇ.18): ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 19ರಂದು ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ (karnataka sslc result 2022) ಪ್ರಕಟಿಸಲಾಗುತ್ತದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and Secondary Education BC Nagesh) ಟ್ವೀಟ್ ಮಾಡಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board) ಇದಕ್ಕೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಸದ್ಯಕ್ಕೆ ಮೌಲ್ಯ ಮಾಪನ ಪ್ರಕ್ರಿಯೆ ಮುಗಿದಿದ್ದು, ಅಂಕಗಳ ದಾಖಲೀಕರಣ ನಡೆಯುತ್ತಿದೆ.
ಫಲಿತಾಂಶವನ್ನು ವಿದ್ಯಾರ್ಥಿಗಳು ವೆಬ್‌ಸೈಟ್ https://karresults.nic.in/ ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ ತಮ್ಮ ಶಾಲೆಗಳಲ್ಲಿಯೂ, ಎಸ್‌ಎಂಎಸ್ ಮೂಲಕವು ಫಲಿತಾಂಶ ಪಡೆಯಬಹುದು.
ಭಗತ್ ಸಿಂಗ್ ಪಾಠ ಕೈಬಿಟ್ಟಿರುವುದು ನಾಚಿಕೆಗೇಡು ARVIND KEJRIWAL ಕಿಡಿ
ಮಾರ್ಚ್ 28 ರಿಂದ ಏಪ್ರಿಲ್ 11 ರವರಗೆ 2022 ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಈ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು. ಅಲ್ಲದೆ ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಇನ್ನು ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೂ ಸಿಕ್ಕಿದೆ. ಹೌದು ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟುಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ.
ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ವಿವಾದ, ಸಮರ್ಥಿಸಿಕೊಂಡ BC Nagesh
ಉದಾಹರಣೆಗೆ- ಪರೀಕ್ಷೆ ಬರೆದಿರುವ ಆರು ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಇನ್ನುಳಿದ ಮೂರು ವಿಷಯಗಳಲ್ಲಿ ಅನುತ್ತಿರ್ಣವಾಗಿದ್ದರೆ ಆ ಮೂರು ವಿಷಯಗಳಲ್ಲಿ ಥಿಯರಿ ಪರೀಕ್ಷೆಯ ತಲಾ 80 ಅಂಕದ ಶೇ.10ರಷ್ಟುಅಂದರೆ ಮೂರು ವಿಷಯಗಳಿಂದ 24 ಅಂಕಗಳು ಗ್ರೇಸ್ ಅಂಕಗಳಾಗಿ ದೊರೆಯುತ್ತವೆ. ಕನ್ನಡ ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ.10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಗ್ರೇಸ್ ಅಂಕಗಳನ್ನು ಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್ ಅಂಕದಿಂದಾಗಿ ಶೇ.9ರಷ್ಟುವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
- Karnataka SSLC Exam 2022 Result
- SSLC
- SSLC Result 2022
- karnataka secondary education examination board result
- karnataka secondary examination result 2022
- karnataka sslc result
- karnataka sslc result 2022
- karnataka sslc result 2022 date
- karnataka sslc result 2022 date and time
- karnataka sslc result date
- when is karnataka sslc exam 2022
- when is karnataka sslc result
- when is karnataka sslc result 2022