* 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಛತ್ತೀಸ್​ಗಢ ಸರ್ಕಾರ*4.61 ಲಕ್ಷ ಮಕ್ಕಳು ಪರೀಕ್ಷೆಗೆ ರಿಜಿಸ್ಟಾರ್​* ಶೇ.96.81 ರಷ್ಟು ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್

ರಾಯ್‌ಪುರ, (ಮೇ.19) : ಭಾರತದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಳವಾಗಿದ್ದು, ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಭವಿಷ್ಯದ ಮುಖ್ಯ ಘಟ್ಟವಾದ 10 ಹಾಗೂ 12ನೇ ತರಗತಿ ಪರೀಕ್ಷೆಗಳಿಗೆ ಅಡ್ಡಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಎಲ್ಲಾ ರಾಜ್ಯಗಳು ಒಂದೊಂದು ನಿರ್ಧಾರ ತೆಗೆದುಕೊಳ್ಳುತ್ತಿವೆ. ಇದೀಗ, ಛತ್ತೀಸ್​ಗಢ ಸರ್ಕಾರ 10ನೇ ತರತಿಯ ಎಲ್ಲಾ ಮಕ್ಕಳನ್ನ ಪಾಸ್​ ಮಾಡಿ ಆದೇಶ ಹೊರಡಿಸಿದ್ದಾರೆ.

SSLC,PUC ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

ಛತ್ತೀಸ್​ಗಢ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಷನ್​ ಇಂದು (ಬುಧವಾರ) ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಎಲ್ಲಾ 10ನೇ ತರಗತಿಯ ಮಕ್ಕಳನ್ನ ಪಾಸ್​ ಮಾಡಿದೆ. ಈವರೆಗೂ 2.24 ವಿದ್ಯಾರ್ಥಿಗಳು, 2.31ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 4.61 ಲಕ್ಷ ಮಕ್ಕಳು 10ನೇ ತರಗತಿ ಪರೀಕ್ಷೆ ಬರೆಯೋದಕ್ಕೆ ರಿಜಿಸ್ಟಾರ್​ ಮಾಡಿಕೊಂಡಿದ್ರು.

ಈ ಪೈಕಿ ಶೇ.96.81 ರಷ್ಟು ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 9024 ವಿದ್ಯಾರ್ಥಿಗಳು ಸೆಕೆಂಡ್ ಹಾಗೂ 5676 ವಿದ್ಯಾರ್ಥಿಗಳು​ ಮೂರನೇ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿದ್ದಾರೆ. 

ಇನ್ನು ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.