ನಾಳೆ ಸಿಇಟಿ ರಿಸಲ್ಟ್‌: 2 ಲಕ್ಷ ಮಕ್ಕಳ ಭವಿಷ್ಯ ನಿರ್ಧಾರ

*  ಆಗಸ್ಟ್‌ 28ರಿಂದ 30ರವರೆಗೆ ನಡೆದಿದ್ದ ಸಿಇಟಿ ಪರೀಕ್ಷೆ
*  ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟ 
*  ಸಚಿವರ ದಿನಾಂಕದಲ್ಲಿ ವ್ಯತ್ಯಯವಾದಲ್ಲಿ ಸೆ.21ರಂದು ಪ್ರಕಟ 
 

CET Result Will be Announce on Sep 20th in Karnataka grg

ಬೆಂಗಳೂರು(ಸೆ.19): 2020-2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೆ.20ರ ಸೋಮವಾರ ಪ್ರಕಟವಾಗಲಿದೆ. 

ಆಗಸ್ಟ್‌ 28ರಿಂದ 30ರವರೆಗೆ ಸಿಇಟಿ ನಡೆದಿತ್ತು. ಈ ಬಾರಿ 2 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸೆ.20ರಂದು ಫಲಿತಾಂಶ ನೀಡಲಾಗುವುದು ಎಂದು ಈ ಹಿಂದೆಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದರು. 

ಸಿಇಟಿ ವಿದ್ಯಾರ್ಥಿಗಳಿಗೆ 8 ಕೃಪಾಂಕ?

ಆ ಪ್ರಕಾರವಾಗಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿದ್ಧತೆಯಲ್ಲಿ ತೊಡಗಿದ್ದು, ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟ ಮಾಡಲಿದೆ. ಸಚಿವರ ದಿನಾಂಕದಲ್ಲಿ ವ್ಯತ್ಯಯವಾದಲ್ಲಿ ಸೆ.21ರಂದು ಪ್ರಕಟಿಸಲಾಗುವುದು ಎಂದು ಕೆಇಎ ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios