ಸಿಬಿಎಸ್​ಇ 10ನೇ ತರಗತಿ, 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE Class 10th and 12 Exam Timetable 2024) 2023-2024 ರ ಶೈಕ್ಷಣಿಕ ವರ್ಷದ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ.

CBSE Board Exam Date Sheet 2024 announced Here Is Full Time Table san

ಬೆಂಗಳೂರು (ಡಿ.12): 2023-24ರ ಶೈಕ್ಷಣಿಕ ವರ್ಷದ ಸಿಬಿಎಸ್‌ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಆರಂಭವಾಗಲಿದೆ. ಈ ಕುರಿತಾದ ಸಂಪೂರ್ಣ ಟೈಮ್‌ ಟೇಬಲ್‌ ಇಲ್ಲಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE Class 10th and 12 Exam Timetable 2024) ಅಧಿಕೃತವಾಗಿ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಡಿಸೆಂಬರ್ 12 ರಂದು 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕದ ಶೀಟ್‌ಅನ್ನು ಪ್ರಕಟ ಮಾಡಿದ್ದು. ಎರಡೂ ತರಗತಿಗಳಿಗೆ ಫೆಬ್ರವರಿ 15 ರಿಂದ ಪ್ರಾರಂಭವಾಗಲಿದೆ. 10 ನೇ ತರಗತಿ ಪರೀಕ್ಷೆಗಳು ಮಾರ್ಚ್ 13 ರಂದು ಮುಕ್ತಾಯಗೊಳ್ಳಲಿದ್ದು, 12 ನೇ ತರಗತಿ ಪರೀಕ್ಷೆಗಳು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿವೆ.

"ಡೇಟ್ ಶೀಟ್ ಸಿದ್ಧಪಡಿಸುವಾಗ, ಎರಡು ವಿಷಯಗಳ ನಡುವೆ ಸಾಕಷ್ಟು ಅಂತರವಿದೆ ಎಂದು ಮಂಡಳಿಯು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. 12 ನೇ ತರಗತಿಯ ವೇಳಾಪಟ್ಟಿಯನ್ನು ನಿರ್ಧರಿಸುವಾಗ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಲಾಗಿದೆ" ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.

 

Latest Videos
Follow Us:
Download App:
  • android
  • ios