ಚಿಕ್ಕಮಗಳೂರು ಸರಕಾರಿ ಕಾಲೇಜಿಗೆ 50 ಲಕ್ಷರೂ.ಮೌಲ್ಯದ ಪೀಠೋಪಕರಣ ಕೊಡುಗೆ ನೀಡಿದ ಉದ್ಯಮಿ

ಚಿಕ್ಕಮಗಳೂರು ನಗರದ ಐಡಿಎಸ್ ಜಿ ಕಾಲೇಜಿಗೆ  ಲೈಫ್ಲೈನ್ಯಿಂದ   50 ಲಕ್ಷರೂ. ಪೀಠೋಪಕರಣ ಕೊಡುಗೆ. ಸಂಸ್ಥೆಯ ಮುಖ್ಯಸ್ಥ ಕಿಶೋರ್ ಕುಮಾರ್ ಹೆಗ್ಡೆ ಪಿಠೋಪಕರಣಗಳನ್ನು ಕಾಲೇಜಿಗೆ ಹಸ್ತಾಂತರ  .

businessman donated  Rs 50 lakhs worth furniture to Chikkamagaluru  IDSG Government College kannada news gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.19): ಚಿಕ್ಕಮಗಳೂರು ನಗರದ ಐಡಿಎಸ್ ಜಿ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಯಮಿಯೊಬ್ಬರು 50 ಲಕ್ಷರೂ.ಮೌಲ್ಯದ ಪೀಠೋಪಕರಣ ಕೊಡುಗೆಯಾಗಿ ನೀಡಿದ್ದಾರೆ. ನಗರದ ಐಡಿಎಸ್ಜಿ ಸರ್ಕಾರಿ ಕಾಲೇಜಿಗೆ ಲೈಫ್ಲೈನ್ ಸಂಸ್ಥೆ ವತಿಯಿಂದ  50 ಲಕ್ಷರೂ.ಗಳ ಪೀಠೋಪಕರಣ ಕೊಡುಗೆ ನೀಡಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಕಿಶೋರ್ ಕುಮಾರ್ ಹೆಗ್ಡೆ ಪಿಠೋಪಕರಣಗಳನ್ನು ಕಾಲೇಜಿಗೆ ಹಸ್ತಾಂತರ ಮಾಡಿದ್ದಾರೆ. 

ದಾನಶೀಲತೆಯಿಂದ ಸದೃಢ ರಾಷ್ಟ್ರ: 
ಐಡಿಎಸ್ಜಿ ಸರ್ಕಾರಿ ಕಾಲೇಜಿಗೆ ಲೈಫ್ಲೈನ್ ಸಂಸ್ಥೆ ವತಿಯಿಂದ  50ಲಕ್ಷರೂ.ಗಳ ಪೀಠೋಪಕರಣ ಕೊಡುಗೆ ವಿತರಣಾ ಸಮಾರಂಭದಲ್ಲಿ ಮಾತಾಡಿದ ಲೈಫ್ ಲೈನ್ ಸಂಸ್ಥೆ ಮುಖ್ಯಸ್ಥ ಕಿಶೋರ್ ಕುಮಾರ್ ಹೆಗ್ಡೆ ದಾನ ನೀಡುವಲ್ಲಿ, ಜನಸೇವೆಯಲ್ಲಿ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ವಿದ್ಯಾಭ್ಯಾಸದ ನಂತರ ದುಡಿಮೆಯ ಸಂದರ್ಭದಲ್ಲಿ ಲಾಭದ ಸ್ವಲ್ಪ ಭಾಗವನ್ನಾದರೂ ದೇಶಕ್ಕಾಗಿ ಕೊಡುವುದರ ಮೂಲಕ ದೇಶವನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ವಿಶ್ವದಲ್ಲಿಯೇ ಅತೀ ಅಪರೂಪ ಪ್ರಕರಣ, 30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಕಿಡ್ನಿ ಕಸಿ

ಯಾವುದೇ ದೇಶವಾದರೂ ಸರ್ಕಾರದಿಂದಲೇ ಎಲ್ಲ ಕಾರ್ಯಗಳನ್ನು ಸಂಪೂರ್ಣವಾಗಿ ಮಾಡಲಾಗದು.  ಸಮಾಜವೂ ಸಂಘ-ಸಂಸ್ಥೆಗಳು ಜೊತೆಗೆ ನಾಗರಿಕರೂ ಕೈಜೋಡಿಸಿದಾಗ ಆನೆಬಲ ಬರುತ್ತದೆ.  ಚೆನ್ನಾಗಿ ದುಡಿಮೆ ಮಾಡಿ.  ತೆರಿಗೆಯನ್ನು ಪಾವತಿಸಿ. ಲಾಭಾಂಶದಲ್ಲಿ ಶೇ 7ರಿಂದ ೮ರಷ್ಟು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ಹೆಗ್ಡೆ,  ಕಿತ್ತು ತೆಗೆದುಕೊಳ್ಳುವ ಜನರನ್ನೊಳಗೊಂಡ ದೇಶ ಸುಸ್ಥಿರವಾಗಲು ಸಾಧ್ಯವಿಲ್ಲ ಎಂದರು.

ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರೆ ದಾನ ಸಾರ್ಥಕ : 
ಈ ಮಣ್ಣು, ನೀರು, ಗಾಳಿ, ಸೇರಿದಂತೆ ನಿಸರ್ಗವನ್ನು ಬಳಸಿಕೊಂಡು ಬದುಕಿದ್ದೇವೆ.  ಪ್ರಕೃತಿಗೆ ಬಹಳಷ್ಟು ಹಾನಿ ಮಾಡಿದ್ದೇವೆ.  ನಾವು ಪಾವತಿಸುವ ತೆರಿಗೆ ಒಂದುರೀತಿಯಲ್ಲಿ ಇದಕ್ಕೆ ತೆರವು ದಂಡವೆಂದುಕೊಳ್ಳಬೇಕು.  ಲಾಭದಲ್ಲಿ ನೀಡುವ ದಾನ ನಮ್ಮ ನಿಜವಾದ ಸಾಮಾಜಿಕಬದ್ಧತೆ.  ನಿಯತ್ತಿನಿಂದ ತೆರಿಗೆ ಪಾವತಿಸುವ ಮನೋಭಾವ ರೂಢಿಸಿಕೊಳ್ಳಬೇಕೆಂದವರು ಕಿವಿಮಾತು ಹೇಳಿದರು.

ಮಕ್ಕಳ ಮತ್ತು ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡ್ತಿದೆಯಾ ದಾಂಡೇಲಿಯ ಆಸ್ಪತ್ರೆಗಳು!?

ಈ ಕಾಲೇಜಿ ಮುಂಭಾಗದಲ್ಲಿ ಓಡಾಡುವಾಗ ಕಾಂಪೌಂಡ್ ಒಳಗೆ ಇರುವುದಕ್ಕಿಂತ ರಸ್ತೆಯಲ್ಲೇ ಹೆಚ್ಚು ವಿದ್ಯಾರ್ಥಿಗಳಿರುವುದನ್ನು ಗಮನಿಸಿದ್ದು,  ಕೊಠಡಿ ಹಾಗೂ ಪೀಠೋಪಕರಣಗಳ ಕೊರತೆಯಿಂದ ಎರಡು ಪಾಳಿಯಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂತು.  ಇಲ್ಲಿ ಬಂದು ನೋಡಿದಾಗ ಒಟ್ಟು  380 ಡೆಸ್ಕ್ಗಳ ಅವಶ್ಯಕತೆ ಕಂಡು ಬಂತು.  30 ಲಕ್ಷರೂ ಅಂದಾಜಿನಲ್ಲಿ ಡೆಸ್ಕ್ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಲಾಯಿತು. 

ಆ ನಂತರ ಮರದಲ್ಲೆ ಪೀಠೋಪಕರಣ ಗುಣಮಟ್ಟದೊಂದಿಗೆ ಸಿದ್ಧಪಡಿಸಿದಾಗ 50 ಲಕ್ಷರೂ. ವೆಚ್ಚವಾಯಿತು ಎಂದ ಕಿಶೋರ ಕುಮಾರ್ ಹೆಗ್ಡೆ,  ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ದಾನ ಸಾರ್ಥಕವೆನಿಸುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್.ರಮೇಶ್ ವೇದಿಕೆಯಲ್ಲಿದ್ದರು.

Latest Videos
Follow Us:
Download App:
  • android
  • ios