ಏ.8ರಿಂದ ನಿಗದಿತ ದಿನಾಂಕಗಳಲ್ಲಿ ವಿವಿಧ ಪರೀಕ್ಷೆ ನಡೆಸುವುದಾಗಿ ತಿಳಿಸಿದ ಬೆಂ.ವಿವಿ| ಮಹಾರಾಣಿ ಕ್ಲಸ್ಟರ್ ವಿವಿ ಪರೀಕ್ಷೆಗಳು ಮುಂದೂಡಿಕೆ| ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪರೀಕ್ಷೆ ಮುಂದೂಡಲಾಗಿದ್ದು, ಪರೀಕ್ಷೆಗಳ ದಿನಾಂಕ ಶೀಘ್ರವೇ ಪ್ರಕಟ|
ಬೆಂಗಳೂರು(ಏ.08): ಸಾರಿಗೆ ಮುಷ್ಕರ ಹಿನ್ನೆಲೆ ಏ.7ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದ್ದ ಬೆಂಗಳೂರು ವಿಶ್ವವಿದ್ಯಾಲಯ ಇದೀಗ ಏ.8ರಿಂದ ನಿಗದಿತ ದಿನಾಂಕಗಳಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ.
ವಿವಿ ದೂರ ಶಿಕ್ಷಣ ಮತ್ತು ಅಂಚೆ ತೆರಪಿನ ಒಂದು ಮತ್ತು ಮೂರನೇ ವರ್ಷದ ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎಂ, ಬಿಬಿಎ, ಬಿಎಚ್‌ಎಂ ಹಾಗೂ ಎರಡನೇ ವರ್ಷ ಎಂಕಾಂ, ಎಂಎಸ್‌ಸಿ, ಸ್ನಾತಕೋತ್ತರ ಡಿಪ್ಲೋಮಾ-ಗ್ರಾಮೀಣ ಅಭಿವೃದ್ಧಿ ಪರೀಕ್ಷೆಗಳು ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಈ ಮೊದಲು ನಿಗದಿಪಡಿಸಿದ್ದ ದಿನಾಂಕದಂದೇ ಜರುಗಲಿವೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರಿಗೆ ನೌಕರರ ಮುಷ್ಕರ: ಪರೀಕ್ಷೆಗಳು ಮುಂದೂಡಿಕೆ
ಇನ್ನು ಮಹಾರಾಣಿ ಕ್ಲಸ್ಟರ್ ವಿವಿ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ನಾಳೆ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ವಿಶ್ವವಿದ್ಯಾಲಯ ಮುಂದೂಡಿದೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪರೀಕ್ಷೆ ಮುಂದೂಡಲಾಗಿದ್ದು, ಪರೀಕ್ಷೆಗಳ ದಿನಾಂಕ ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ.
