ಬೆಂಗಳೂರು (ಸೆ.04):  ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟ ತಮ್ಮಲ್ಲಿರುವ ಇಂಜಿನಿಯರಿಂಗ್‌ ಸೀಟುಗಳ ಪ್ರವೇಶಕ್ಕೆ ನಡೆಸಿದ್ದ 2020ನೇ ಕಾಮೆಡ್‌-ಕೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ‌ ಪಡೆದಿದ್ದ ವಿದ್ಯಾರ್ಥಿ ಎಂ.ರಕ್ಷಿತ್‌ ಇಲ್ಲಿಯೂ ಮೊದಲ ರಾರ‍ಯಂಕ್‌ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಆರ್‌.ವಿ. ಪಿಯು ಕಾಲೇಜು ವಿದ್ಯಾರ್ಥಿಯಾಗಿರುವ ಎಂ.ರಕ್ಷಿತ್‌ ಕಾಮೆಡ್‌-ಕೆಯಲ್ಲಿ 180 ಅಂಕಗಳಿಗೆ 168 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ‌ ಪಡೆದುಕೊಂಡಿದ್ದಾರೆ. ಇದೇ ವಿದ್ಯಾರ್ಥಿ ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸರ್ಕಾರ ನಡೆಸಿದ್ದ ಸಿಇಟಿಯಲ್ಲೂ ಪ್ರಥಮ ರಾರ‍ಯಂಕ್‌ ಪಡೆದಿದ್ದರು.

ಈ ಜನ್ಮರಾಶಿಯವ್ರು ಪರ್‌ಫೆಕ್ಟ್ ಸಹೋದ್ಯೋಗಿಗಳು! ...

ಇನ್ನು, ರಾಜಸ್ಥಾನದ ಸೌರವ್‌ ಕುಮಾರ್‌ ಮತ್ತು ಬಿಹಾರ್‌ನ ಅನುಪಮಾ ಸಿನ್ಹಾ ಕಾಮೆಡ್‌-ಕೆ ಫಲಿತಾಂಶದಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ  ಸ್ಥಾನ ‌ಗಳಿಸಿದ್ದಾರೆ. ಉಳಿದಂತೆ ಟಾಪ್‌ 10  ರಲ್ಲಿ ಮೊದಲ ಮತ್ತು 7ನೇ ರಾರ‍ಯಂಕ್‌ ಪಡೆದಿರುವ ಶಾದನ್‌ ಹುಸೇನ್‌ ಕರ್ನಾಟಕದವರಾಗಿದ್ದು, ಉಳಿದ 8 ವಿದ್ಯಾರ್ಥಿಗಳು ಹೊರ ರಾಜ್ಯದವರಾಗಿದ್ದಾರೆ.

ಮೊದಲ 5,000 ರಾರ‍ಯಂಕ್‌ ಪಡೆದ 1,219 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಶೇ.70 ಅಂಕಪಡೆದಿದ್ದಾರೆ. ಉಳಿದ 3,781 ಅಭ್ಯರ್ಥಿಗಳು ಶೇ.56.67ಕ್ಕಿಂತ ಹೆಚ್ಚು ಶೇ.70ಕ್ಕಿಂತ ಕಮ್ಮಿ ಅಂಕಗಳಿಸಿದ್ದಾರೆ. ಇದೇ ರೀತಿ ಮೊದಲ 100 ಸ್ಥಾನ  ಪೈಕಿ 45 ಸ್ಥಾನ ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ. 55 ಇತರೆ ರಾಜ್ಯಗಳ ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ.

ಆ.19ರಂದು ದೇಶಾದ್ಯಂತ 259 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದ ಕಾಮೆಡ್‌-ಕೆ ಪರೀಕ್ಷೆಯಲ್ಲಿ 43,249 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆದ ಎಲ್ಲರೂ ಉತ್ತಮ ಫಲಿತಾಂಶದೊಂದಿಗೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಕಾಮೆಡ್‌-ಕೆ ಅಧಿಕಾರಿಗಳು ತಿಳಿಸಿದ್ದಾರೆ.