Asianet Suvarna News Asianet Suvarna News

ಶಾಲಾ ಆರಂಭದ ಬಗ್ಗೆ ಮಹತ್ವದ ಮಾಹಿತಿ

ಬೆಂಗಳೂರು ನಗರದಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ| ಪಾಲಿಕೆಯ 33 ಪ್ರೌಢಶಾಲೆ, 15 ಪಿಯುಸಿ ಪೂರ್ಣಾವಧಿ ತರಗತಿಗೆ ಸಿದ್ಧತೆ| ವ್ಯಕ್ತಿಗತ ಅಂತರದಿಂದ ಕುಳಿತುಕೊಂಡು ಪಾಠ-ಪ್ರವಚನ ಆಲಿಸಲು ವ್ಯವಸ್ಥೆ ಕ್ರಮ| ಉಪನ್ಯಾಸಕರಿಗೆ ಕೋವಿಡ್‌ ಪರೀಕ್ಷೆ| 

BBMP Commissioner N Manjunath Prasad Talks Over School Reopening grg
Author
Bengaluru, First Published Feb 1, 2021, 8:18 AM IST

ಬೆಂಗಳೂರು(ಫೆ.01): ಬಿಬಿಎಂಪಿ ವ್ಯಾಪ್ತಿಯ ಶಾಲೆ-ಕಾಲೇಜುಗಳಲ್ಲಿ ಇಂದು(ಸೋಮವಾರ)ದಿಂದ 9ನೇ ತರಗತಿಯಿಂದ ದ್ವಿತೀಯ ಪಿಯು ತರಗತಿಗಳು ಆರಂಭವಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಸೋಮವಾರದಿಂದ 9ನೇ ತರಗತಿ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಯ ಚಟುವಟಿಕೆ ಮಾಡಲಾಗುತ್ತಿದೆ. ಈ ಇದೇ ರೀತಿಯಾಗಿ ಪಾಲಿಕೆಯ 33 ಪ್ರೌಢಶಾಲೆಗಳು ಹಾಗೂ 15 ಪದವಿ ಪೂರ್ವ ಕಾಲೇಜುಗಳಲ್ಲಿ ಪೂರ್ಣಾವಧಿಯ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಉಪನ್ಯಾಸಕರ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ: ಅಶ್ವತ್ಥನಾರಾಯಣ ಮಾಹಿತಿ

ಕಳೆದ ಕೆಲವು ದಿನಗಳ ಹಿಂದಷ್ಟೇ ಪದವಿ, ಪದವಿ ಪೂರ್ವ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳನ್ನು ಆರಂಭಿಸಲಾಗಿದ್ದು, ಈ ವೇಳೆ ಪಾಲಿಕೆ ಶಾಲೆ-ಕಾಲೇಜುಗಳ ಎಲ್ಲ ಶಿಕ್ಷಕರು, ಉಪನ್ಯಾಸಕರಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದೆ. ಜತೆಗೆ, ಎಲ್ಲರ ಪರೀಕ್ಷಾ ವರದಿಗಳು ನೆಗೆಟಿವ್‌ ಬಂದಿದ್ದು, ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ. ಹೀಗಾಗಿ, ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ಅಗತ್ಯವಿಲ್ಲ. ಮಕ್ಕಳಿಗೆ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಮಕ್ಕಳಿಗೆ ದೇಹದ ಉಷ್ಣತೆ ಪರೀಕ್ಷೆ, ಕೈಗಳಿಗೆ ಸ್ಯಾನಿಟೈಸರ್‌, ವ್ಯಕ್ತಿಗತ ಅಂತರದಿಂದ ಕುಳಿತುಕೊಂಡು ಪಾಠ-ಪ್ರವಚನ ಆಲಿಸಲು ವ್ಯವಸ್ಥೆ ಕ್ರಮವಹಿಸಲಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ಕೊರತೆಯಾಗಿಲ್ಲ ಎಂದು ವಿವರಸಿದರು.
 

Follow Us:
Download App:
  • android
  • ios