ಉಚಿತ IAS ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

ಐ.ಎ.ಎಸ್.‌ ಪರೀಕ್ಷೆ- 2021ನ್ನು ಬರೆಯುವ ಬ್ರಾಹ್ಮಣ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ.

Application invites For free IAS Exam coaching To brahman Candidates rbj

ಬೆಂಗಳೂರು, (ಸೆ.22): ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐ.ಎ.ಎಸ್. ಪರೀಕ್ಷೆಗಾಗಿ ಆನ್ಲೈನ್ ತರಬೇತಿಯನ್ನು ಆಯೋಜಿಸಿದೆ.

 7 ತಿಂಗಳು ತರಬೇತಿ ಅವಧಿ  ಇರಲಿದೆ. ಆಸಕ್ತ ಬ್ರಾಹ್ಮಣ ಪದವೀಧರ ಅಭ್ಯರ್ಥಿಗಳಿಗಾಗಿ ದಿನಾಂಕ 30.09.2020 ಅರ್ಜಿ ಸಲ್ಲಿಸಲು ಕೋರಲಾಗಿದೆ.

IAS ಸಂದರ್ಶನದಲ್ಲಿ ಕೇಳುವ 'ರಕ್ತ ಕುದಿಯುವಂತ' ಪ್ರಶ್ನೆಗಳು, ಆದ್ರೆ #BeCool...

 ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ, ಯು.ಪಿ.ಎಸ್.ಸಿ. ನಡೆಸುವ 2021 ನೇ ಸಾಲಿನ ನಾಗರೀಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಚ್ಚಿಸುವ ರಾಜ್ಯದ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು, ರಾಷ್ಟ್ರದ ಪ್ರತಿಷ್ಠಿತ ತರಬೇತಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಚಿತ ಆನ್‌ಲೈನ್ ತರಬೇತಿಯನ್ನು ನೀಡಲು ಮಂಡಳಿಯು ನಿರ್ಧರಿಸಿದೆ.

ಈ ಉಚಿತ ಆನ್‌ ಲೈನ್‌ ತರಬೇತಿಯನ್ನು ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ಮಂಡಳಿಯ ವೆಬ್‌ಸೈಟ್‌ ಮುಖಾಂತರ ಇಂದಿನಿಂದ ಅರ್ಜಿ ಸಲ್ಲಿಸಬಹುದು. ದಿನಾಂಕ 30.09.2020 ರ ಬುಧವಾರ ಸಂಜೆ 5.30 ರ ಒಳಗೆ ಅರ್ಜಿ ಸಲ್ಲಿಸಲು ಕೋರಿದೆ

ಮಹಿಳೆಯೊಬ್ಬಳಿಗೆ ಒಟ್ಟಿಗೆ 2 ಗಂಡು ಮಕ್ಕಳು ಹುಟ್ಟುತ್ತವೆ. ಆದರೆ, ಅವಳಿಯಲ್ಲ, ಹೇಗೆ?

* ವಯೋಮಿತಿ: 21ರಿಂದ 32 ವರ್ಷಗಳು ನಿಗದಿ ಪಡಿಸಲಾಗಿದೆ
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರ್ಣಗೊಳಿಸರಬೇಕು.

* ಅಭ್ಯರ್ಥಿಯ ಸಾಮಾನ್ಯ ಅರ್ಹತೆ: 
1. ಕರ್ನಾಟಕದ ಖಾಯಂ ನಿವಾಸಿಯಾಗರಬೇಕು.
2. ಬ್ರಾಹ್ನಣ ಜಾತಿಗೆ ಸೇರಿದವರಾಗಿರಬೇಕು.
3. ದಿವ್ಯಾಂಗ ಅಭ್ಯರ್ಥಿಗಳು ನಿಯಮನುಸಾರ ಸಕ್ಷಮ ಪ್ರಾಧಿಕಾರದಿಂದ ನಿಗದಿಪಡಿಸಲಾದ ದಿವ್ಯಾಂಗ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
4. ಕರ್ನಾಟಕ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಿತರಿಸುವ ಪ್ರಮಾಣ ಪತ್ರ ಹೊಂದಿದವರಿಗೆ ಆಧ್ಯತೆ ನೀಡಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :  coach4ias.ksbdb@karnataka.gov.in ನ್ನು ಸಂಪರ್ಕಿಸಿ. 

Latest Videos
Follow Us:
Download App:
  • android
  • ios