Asianet Suvarna News Asianet Suvarna News

ಆಂಧ್ರದಲ್ಲಿ ನ.2ರಿಂದ ಪ್ರಾಥಮಿಕ ಶಾಲೆ ಶುರು!

ಆಂಧ್ರದಲ್ಲಿ ನ.2ರಿಂದ ಪ್ರಾಥಮಿಕ ಶಾಲೆ ಶುರು| 1, 3, 5, 7ನೇ ತರಗತಿ ಒಂದು ದಿನ| 2, 4, 6, 8ನೇ ತರಗತಿ ಮರುದಿನ| ಒಂದು ತಿಂಗಳು ಸಮ- ಬೆಸ ವ್ಯವಸ್ಥೆ| ಕೊರೋನಾ ನಡುವೆಯೇ ಆರಂಭ

AP schools to reopen from Nov 2 Classes only on alternate days pod
Author
Bangalore, First Published Oct 22, 2020, 7:25 AM IST

ವಿಜಯವಾಡ(ಅ.22): ಕೊರೋನಾ ಭೀತಿಯಿಂದಾಗಿ ಇತರ ರಾಜ್ಯಗಳು ಪ್ರೌಢಶಾಲೆ ಹಾಗೂ ಕಾಲೇಜುಗಳ ಆರಂಭಕ್ಕೆ ಹಿಂದೇಟು ಹಾಕುತ್ತಿರುವಾಗಲೇ ಆಂಧ್ರ ಪ್ರದೇಶದಲ್ಲಿ ಪ್ರೌಢಶಾಲೆಗಳ ಬಳಿಕ ಇದೀಗ ಪ್ರಾಥಮಿಕ ಶಾಲೆಗಳನ್ನು ಸಹ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.2ರಿಂದ 1ರಿಂದ 8ನೇ ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ತಿಳಿಸಿದ್ದಾರೆ.

ಸಾಮಾಜಿಕ ಅಂತರದೊಂದಿಗೆ ಒಂದು ದಿನ 1, 3, 5 ಮತ್ತು 7ನೇ ತರಗತಿ, ಮತ್ತೊಂದು ದಿನ 2, 4, 6 ಮತ್ತು 8ನೇ ತರಗತಿಗಳು ನಡೆಯಲಿದ್ದು, ಮಧ್ಯಾಹ್ನ ಊಟದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತದೆ. ಶಾಲೆಯಲ್ಲಿ 750ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇದ್ದರೆ ಮೂರು ದಿನಕ್ಕೆ ಒಂದರಂತೆ ತರಗತಿಗಳು ನಡೆಯಲಿವೆ.

ನವೆಂಬರ್‌ವರೆಗೆ ಮಾತ್ರ ಈ ವ್ಯವಸ್ಥೆ ಇರಲಿದ್ದು, ಪರಿಸ್ಥಿತಿ ನೋಡಿಕೊಂಡು ಡಿಸೆಂಬರ್‌ನಿಂದ ಪ್ರಾಥಮಿಕ ಶಾಲೆಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ‘ನಾಡು-ನೇಡು’ ಯೋಜನೆ ನ.15ರ ಒಳಗಾಗಿ ಜಾರಿಗೆ ತರುವತ್ತ ಗಮನ ಹರಿಸುವಂತೆ ಹಾಗೂ 2 ದಿನಗಳಿಗೆ ಒಮ್ಮೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಜಗನ್‌ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios