ಬೆಂಗಳೂರು (ಸೆ.16) :   ಮಾಧ್ಯಮ ರಂಗದಲ್ಲಿ ಕೆಲಸ ಮಾಡಲಿಚ್ಛಿಸುವವರಿಗೆ ವಿವಿಧ ಕೋರ್ಸ್‌ಗಳಿಗೆ ತರಬೇತಿ ನೀಡಲು ಪತ್ರಕರ್ತ ಹಾಗೂ ನಿರೂಪಕ ಗೌರೀಶ್‌ ಅಕ್ಕಿ ಸಾರಥ್ಯದ ‘ಆಲ್ಮಾ ಮೀಡಿಯಾ ಸ್ಕೂಲ್‌’ ನಲ್ಲಿ ಪ್ರಸಕ್ತ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

 ಮುದ್ರಣ (ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಸಂಯೋಜಿತ ಕೋರ್ಸ್‌ಗಳಾದ ಪಿಜಿ ಡಿಪ್ಲೊಮಾ ಇನ್‌ ಮಾಡರ್ನ್‌ ನ್ಯೂಸ್‌ ಪ್ರಾಕ್ಟೀಸಸ್‌ ಕುರಿತು ತಿಳಿಸಲಾಗುವುದು. 

ಯಾವುದೇ ಪದವಿ ಪಡೆದವರು(ಫಲಿತಾಂಶ ಬರದವರು ಸಹಿತ), ಪಿಯುಸಿ ಹಾಗೂ ತತ್ಸಮಾನ ಕಲಿತವರು ತರಬೇತಿಗೆ ಅರ್ಹರು. ಆಸಕ್ತರು ಕೂಡಲೇ ಎಎಂಸಿ ಸಿಟಿ ಕಾಲೇಜ್‌, 33ನೇ ಕ್ರಾಸ್‌, 2ನೇ ಮುಖ್ಯ ರಸ್ತೆ, 7ನೇ ಬ್ಲಾಕ್‌ ಜಯನಗರದಲ್ಲಿರುವ ಸ್ಕೂಲ್‌ಗೆ ಭೇಟಿ ನೀಡಬಹುದು. ಇಲ್ಲವೇ ಮೊ. 76187 46667 ಸಂಖ್ಯೆಗೆ ಸಂಪರ್ಕಿಸಬಹುದು