ಗೌರೀಶ್ ಅಕ್ಕಿ ಸಾರಥ್ಯ: ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ ಪತ್ರಿಕೋದ್ಯಮ ಡಿಪ್ಲೋಮಾಗೆ ಪ್ರವೇಶಾತಿ ಆರಂಭ

ಆಲ್ಮಾ ಮೀಡಿಯಾ ಸ್ಕೂಲ್‌ನ "ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್‌ ಆರಂಭವಾಗಿದೆ. 6 ತಿಂಗಳ ಅವಧಿಯ ಕೋರ್ಸ್‌ ಇದಾಗಿದ್ದು, ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಸಮಗ್ರ ಕಲಿಕೆ ಇದಾಗಿದೆ. ಪಿಯು ಮತ್ತು ಪದವಿ ಮುಗಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ ಕೊನೆವಾರದಲ್ಲಿ ತರಗತಿಗಳು ಆರಂಭವಾಗಲಿವೆ. 

Admission Started to Diploma in Journalism at Alma Media School in Bengaluru grg

ಬೆಂಗಳೂರು(ಜು.19):  ಕಳೆದ ಐದು ವರ್ಷಗಳಿಂದ ಹಿರಿಯ ಪತ್ರಕರ್ತ- ಸುದ್ದಿ ನಿರೂಪಕ, ಗೌರೀಶ್ ಅಕ್ಕಿ ಅವರ ಸಾರಥ್ಯದಲ್ಲಿ ಪ್ರಾಯೋಗಿಕ ಪತ್ರಿಕೋದ್ಯಮ ಕಲಿಕೆಯಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಉಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಆಲ್ಮಾ ಮೀಡಿಯಾ ಸ್ಕೂಲ್‌. ಇದೀಗ ಈ ಸಂಸ್ಥೆ ಪತ್ರಿಕೋದ್ಯಮ ಆಕಾಂಕ್ಷಿಗಳಿಗಾಗಿ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದೆ 

ಆಲ್ಮಾ ಮೀಡಿಯಾ ಸ್ಕೂಲ್‌ನ "ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ (Diploma in Practical Journalism and Media Management)" ಕೋರ್ಸ್‌ಗೆ ಅಡ್ಮಿಶನ್‌ ಆರಂಭವಾಗಿದೆ. 6 ತಿಂಗಳ ಅವಧಿಯ ಕೋರ್ಸ್‌ ಇದಾಗಿದ್ದು, ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಸಮಗ್ರ ಕಲಿಕೆ ಇದಾಗಿದೆ. ಪಿಯು ಮತ್ತು ಪದವಿ ಮುಗಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ ಕೊನೆವಾರದಲ್ಲಿ ತರಗತಿಗಳು ಆರಂಭವಾಗಲಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 25, 2023.

ಬ್ಯಾಗ್‌ರಹಿತ ದಿನ ಆಚರಣೆ: ಶಾಲೆಗಳಲ್ಲಿ ‘ಸಂಭ್ರಮದ ಶನಿವಾರ’

ಏನು ಈ ಕೋರ್ಸ್‌ನ ವೈಶಿಷ್ಟ್ಯ...?

ವರ್ಷದಿಂದ ವರ್ಷಕ್ಕೆ ಪಠ್ಯದ ವಿಷಯ, ತಂತ್ರಜ್ಞಾನ ಅಳವಡಿಕೆ, ಕಲಿಕೆಯ ವಿಧಾನ, ಹೀಗೆ ಎಲ್ಲವುಗಳಲ್ಲೂ ಹೊಸತನ್ನು ಮತ್ತು ಸೂಕ್ತವಾದದನ್ನು ಅನುಷ್ಠಾನಕ್ಕೆ ತರುವಲ್ಲಿ ಆಲ್ಮಾ ಮೀಡಿಯಾ ಸ್ಕೂಲ್ ಸದಾ ಮುಂದೆ. ಮಾಧ್ಯಮ ಕ್ಷೇತ್ರದಲ್ಲಿ ಅನುಭವವಿರುವ ಪರಿಣತರಿಂದ ತರಬೇತಿ, ವಿಶೇಷ ಅತಿಥಿಗಳಿಂದ ಉಪನ್ಯಾಸ, ಪ್ರತಿನಿತ್ಯ ಪ್ರಾಯೋಗಿಕ ತರಬೇತಿಗಳ ಮೂಲಕ ಸುದ್ದಿಮನೆಯ ನೇರ ಅನುಭವ ವಿದ್ಯಾರ್ಥಿಗಳಿಗೆ ದೊರಕಿಸಕೊಡುವುದು ಆಲ್ಮಾದ ವೈಶಿಷ್ಟ್ಯ.. ರೆಗ್ಯುಲರ್‌ ಕೋರ್ಸ್‌ ಅಷ್ಟೆ ಅಲ್ಲದೇ ಆನ್‌ಲೈನ್‌ ಕೋರ್ಸ್‌ ಕೂಡ ಲಭ್ಯವಿದ್ದು, ರಾಜ್ಯದ ಇತರ ಜಿಲ್ಲೆ, ಊರುಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿದ್ದೂ ಪತ್ರಿಕೋದ್ಯಮ ಕಲಿಯಬೇಕೆಂಬ ಆಸಕ್ತಿಯುಳ್ಳವರಿಗೆ ಇದೊಂದು ಸುವರ್ಣ ಅವಕಾಶ. 

ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್‌ ಪಕ್ಷ: ಸಚಿವ ಮಧು ಬಂಗಾರಪ್ಪ

70% ಪ್ರಾಕ್ಟಿಕಲ್‌ 30% ಥಿಯರಿ...! ಏನಿದು?

70% ಪ್ರಾಕ್ಟಿಕಲ್, 30% ಥಿಯರಿ ಎಂಬುದು ಆಲ್ಮಾ ಮೀಡಿಯಾ ಸ್ಕೂಲ್‌ನ ಮೂಲ ಸೂತ್ರ. ಅಂದರೆ ಇಡೀ ಸಿಲಬಸ್‌ನಲ್ಲಿ 70 ಪ್ರತಿಶತಃ ಪ್ರಾಯೋಗಿಕ ಕಲಿಕೆಯೇ ಇರುತ್ತದೆ. ಇದರಿಂದ ವಿದ್ಯಾರ್ಥಿಗಳು ಬಹುಬೇಗ ಮಾಧ್ಯಮ ಕ್ಷೇತ್ರದ ಕೌಶಲಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಆಲ್ಮಾದ ಇನ್ನೂ ಕೆಲವು ವಿಶೇಷತೆಗಳನ್ನು ಹೇಳುವುದಾದರೆ : ಮೊದಲನೆಯದಾಗಿ- ಇಲ್ಲಿ, ಮುದ್ರಣ, ರೇಡಿಯೋ, ಡಿಜಿಟಲ್ ಮತ್ತು ಟಿವಿ ಮಾಧ್ಯಮ ಇವುಗಳ ಸಂಯೋಜಿತ (Integrated) ಕಲಿಕೆಯ ಕೋರ್ಸನ್ನು ಒಳಗೊಂಡಿದೆ. ಹಾಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ನ್ಯೂಸ್ ಚಾನೆಲ್, ನ್ಯೂಸ್ ಪೇಪರ್, ರೇಡಿಯೋ ಅಥವಾ ಡಿಜಿಟಲ್ ಮಾಧ್ಯಮ ಹೀಗೆ ತಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಎರಡನೆಯದಾಗಿ : ಸುದ್ದಿಮನೆಗಳ ನೇರ ಅನುಭವ, ಆಧುನಿಕ ತಂತ್ರಜ್ಞಾನಗಳ ಪರಿಚಯ ಮತ್ತು ಅವುಗಳ ಸಮರ್ಪಕ ಕಲಿಕೆ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಲಾಗಿದೆ. ನಿರೂಪಣೆ, ಕಂಠದಾನ‌ (ವಾಯ್ಸ್‌ ಓವರ್), ಸುದ್ದಿ ಬರವಣಿಗೆ, ಎಡಿಟಿಂಗ್ ಕೌಶಲ ಇನ್ನಿತರ ಕೆಲಸಗಳನ್ನು ಅವರಿಗೆ ಕಲಿಸಲಾಗುತ್ತದೆ. ಮೂರನೆಯ ಅಂಶ-ಆಯಾ ಕ್ಷೇತ್ರಗಳಲ್ಲಿ ಪರಿಣತರಾದ ವ್ಯಕ್ತಿಗಳೇ ವಿದ್ಯಾರ್ಥಿಗಳಿಗೆ ಇಲ್ಲಿ ಉಪನ್ಯಾಸ ನೀಡಲು ಅತಿಥಿ ಉಪನ್ಯಾಸಕರಾಗಿ ಆಗಮಿಸುತ್ತಾರೆ. ಕ್ರೈಮ್ ರಿಪೋರ್ಟಿಂಗ್, ಸಿನಿಮಾ, ಕ್ರೀಡೆ, ಸಾಹಿತ್ಯ.. ಹೀಗೆ ಯಾವುದೇ ವಿಚಾರ ಇರಲಿ ಆಯಾ ಕ್ಷೇತ್ರಗಳ ಪರಿಣತ ವ್ಯಕ್ತಿಗಳಿಂದಲೇ ವಿದ್ಯಾರ್ಥಿಗಳಿಗೆ ಆ ಕ್ಷೇತ್ರಗಳ ಒಳಹೊರಗುಗಳನ್ನು ತಿಳಿಸಿಕೊಡಲಾಗುತ್ತದೆ. ನಾಲ್ಕನೆಯ ಬಹುಮುಖ್ಯ ಅಂಶ : ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಸೌಲಭ್ಯವನ್ನು ಸಹ ಕಲ್ಪಿಸಿರುವುದು.

ಯಾವೆಲ್ಲ ಮಾಧ್ಯಮ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳು..?

ಈಗಾಗಲೇ ಐದು ಬ್ಯಾಚ್‌ಗಳನ್ನು ಪೂರೈಸಿರುವ ಆಲ್ಮಾ ಮೀಡಿಯಾ ಸ್ಕೂಲ್‌ ಈಗ ಆರನೇ ಬ್ಯಾಚ್‌ನತ್ತ ದಾಪುಗಾಲಿಟ್ಟಿದೆ. ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕದ ಬೇರೆ ಬೇರೆ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ- ಟಿವಿ9, ಸುವರ್ಣ ನ್ಯೂಸ್‌, ನ್ಯೂಸ್‌ ಫಸ್ಟ್, ಪವರ್‌ ಟಿವಿ, ರಾಜ್‌ ನ್ಯೂಸ್‌, ಹೊಸ ದಿಗಂತ, ವಿಜಯ ಕರ್ನಾಟಕ.. ಇಂಥ ಹಲವು ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರತರಾಗಿದ್ದಾರೆ.
ಇದೀಗ 6 ತಿಂಗಳ "ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡಿಶ್ಮನ್‌ ಆರಂಭಗೊಂಡಿದ್ದು, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು. https://forms.gle/uM5mTj6fTABs7Hkp6 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46667 / 74069 46668

Latest Videos
Follow Us:
Download App:
  • android
  • ios