Asianet Suvarna News Asianet Suvarna News

ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆ ಸೇವೆ ಕಡ್ಡಾಯ: ಎಷ್ಟು ದಿನ?

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಇನ್ಮುಂದೆ  ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ಎಂಸಿಐ ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ, ಎಷ್ಟು ದಿನ..?

3 month dist posting must for PG medical students rbj
Author
Bengaluru, First Published Sep 20, 2020, 6:42 PM IST

ನವದೆಹಲಿ, (ಸೆ.20): ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು (ಎಂ.ಡಿ, ಎಂ.ಎಸ್‌) ತಮ್ಮ ಶೈಕ್ಷಣಿಕ ಅವಧಿಯಲ್ಲಿ (2020-21) 3 ತಿಂಗಳ ಕಾಲ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಹೇಳಿದೆ.

'ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ಪಿ.ಜಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ 3, 4 ಇಲ್ಲವೇ 5ನೇ ಸೆಮಿಸ್ಟರ್‌ನಲ್ಲಿ ರೊಟೇಷನ್ ಆಧಾರದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಇದನ್ನು ಡಿಸ್ಟ್ರಿಕ್ಟ್ ರೆಸಿಡೆನ್ಸಿ ಪ್ರೋಗ್ರಾಂ (ಡಿಆರ್‌ಪಿ) ಎಂದು ಕರೆಯಲಾಗುತ್ತದೆ ಎಂದು ಎಂಸಿಐ ತನ್ನ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ.

ಶಾಲಾ-ಕಾಲೇಜು ಆರಂಭದ ಬಗ್ಗೆ ಮಹತ್ವದ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ (ತಿದ್ದುಪಡಿ) ನಿಯಮಗಳು-2020'ರ ಪ್ರಕಾರ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಗೆ ಹಾಜರಾಗುವ ಮುನ್ನ, ಡಿಆರ್‌ಪಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ.

Follow Us:
Download App:
  • android
  • ios