ನವದೆಹಲಿ,(ಜೂ.05): ವೈದ್ಯ ಹಾಗೂ ದಂತ ವೈದ್ಯ ಕೋರ್ಸ್​ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್​) ಫಲಿತಾಂಶ ಇಂದು (ಬುಧವಾರ) ಪ್ರಕಟವಾಗಿದೆ.

 ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 14,10755 ವಿದ್ಯಾರ್ಥಿಗಳ ಪೈಕಿ 797042 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ರಾಜಸ್ತಾನ ಫಸ್ಟ್, ಡೆಲ್ಲಿ ಸೆಕೆಂಡ್, ಆಂಧ್ರಪ್ರದೇಶ ಮೂರನೇ ಸ್ಥಾನದಲ್ಲಿದೆ.

ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ

ರಾಜಸ್ಥಾನ‌ದ ಜೈಪುರ ವಿದ್ಯಾರ್ಥಿ ನಳೀನ್ ಖಾಂದೆಲ್​ವಾಲ್​​​ ದೇಶಕ್ಕೆ ಪ್ರಥಮ ಸ್ಥಾನ ಪಡೆದರೆ, ದೆಹಲಿ ಮೂಲದ ಭವೀಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷತ್ ಕೌಶಿಕದ 2 ಮತ್ತು 3 ನೇ ಸ್ಥಾನ ಗಳಿಸಿದ್ದಾರೆ. 

ಫಣೀಂದ್ರ ಡಿ ಕೆ 36 ನೇ ರ್ಯಾಂಕ್  ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಗ್ಯಾ ಮಿತ್ರ  2ನೇ ಸ್ಥಾನ ಪಡೆದಿದ್ದು, ಕರ್ನಾಟಕ  ಶೇ. 63.51 ಫಲಿತಾಂಶ ಪಡೆದುಕೊಂಡಿದೆ.

Www.nta.ac.in ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿದೆ.
* ಗೂಗಲ್‌ನಲ್ಲಿ ವೆಬ್ ಸೈಟ್ ಲಿಂಕ್ ಟೈಪ್ ಮಾಡಿ ಸರ್ಚ್ ಮಾಡಿದರೆ ಹೋಂ ಪೇಜ್ ತೆರದುಕೊಳ್ಳತ್ತದೆ.
* ಅಲ್ಲಿ ನಿಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಿದ ಮಾಹಿತಿಯನ್ನು ನೀಡಿ.