ಸರ್ವೆಯೊಂದು ಹೇಳುವಂತೆ ಆಫೀಸಿನಲ್ಲಿ ಯಾವ ಕೆಲಸಗಾರರಿಗೆ ಗೌರವ ಸಿಗುತ್ತದೆಯೋ ಅವರು ಹೆಚ್ಚು ಕೆಲಸ ಮಾಡುತ್ತಾರೆ. ಅವರ ಪರ್ಫಾರ್ಮೆನ್ಸ್  ಕೂಡ ಚೆನ್ನಾಗಿರುತ್ತದೆ. ಅಷ್ಟೇ ಯಾಕೆ ಆರೋಗ್ಯದಿಂದಲೂ ಇರುತ್ತಾರಂತೆ.

ಈ ಸರ್ವೇ ತಿಳಿಸಿದಂತೆ ಕಚೇರಿಯಲ್ಲಿ ದೊಡ್ಡ ಪದವಿಯಲ್ಲಿ ಕೆಲಸ ಮಾಡುವವರಿಗೆ ಗೌರವ ಸಿಗುತ್ತದೆ. ಅದೇ ರೀತಿ ಇತರೆ ಕೆಲಸಗಾರರನ್ನೂ ಗೌರವಿಸಿದರೆ, ಕೆಲಸ ಚೆನ್ನಾಗಿ ಮಾಡುತ್ತಾರೆ.ಆಫೀಸಿನಲ್ಲಿ ಪ್ರೊಡಕ್ಟಿವಿಟಿ ಹೆಚ್ಚಬೇಕೆಂದರೆ ಎಲ್ಲರೊಂದಿಗೆ ಉತ್ತಮವಾಗಿ ವ್ಯವಹರಿಸಿದರೆ, ಒಳ್ಳೆಯದು.

ವೃತ್ತಿಯಲ್ಲಿ ನಿಂತ ನೀರಾಗದಂತಿರುವುದು ಹೇಗೆ?

ಹಾರ್ವರ್ಡ್ ಬಿಜಿನೆಸ್‌ ರಿವ್ಯೂನಲ್ಲಿ ಪ್ರಕಟವಾದ ಈ ಅಧ್ಯಯನದ ಸಮೀಕ್ಷೆಗೆ ಸುಮಾರು 20,000 ಕೆಲಸಗಾರರನ್ನು ಬಳಸಿಕೊಂಡಿತ್ತು. ಅರೋಗ್ಯ, ನಂಬಿಕೆ ಮತ್ತು ಸುರಕ್ಷತೆ, ಸಂತೋಷ ಮತ್ತು ತೃಪ್ತಿ, ಪ್ರಾಮುಖ್ಯತೆ, ಅರ್ಥದ ಬಗ್ಗೆ ಐದು ಪ್ರಶ್ನೆಗಳನ್ನು ಕೇಳಲಾಗಿತ್ತು. 

ಯಾರು ಗೌರವ ಸಿಗುತ್ತೆ ಎಂದರೋ ಅವರಲ್ಲಿ ಶೇ.56 ಮಂದಿಯ ಆರೋಗ್ಯವೂ ಉತ್ತಮವಾಗಿತ್ತು. ಅಷ್ಟೇ ಅಲ್ಲ, ಶೇ.  55 ಉದ್ಯೋಗಿಗಳು ಚೆನ್ನಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಸಮೀಕ್ಷೆಯಲ್ಲಿ ತಿಳಿಸಿದಂತೆ ಶೇ. 89 ಉದ್ಯೋಗಿಗಳಿಗೆ ಸಂತೋಷ ಮತ್ತು ತೃಪ್ತಿಯೂ ಇದೆ. ಶೇ. 92 ಜನರಿಗೆ ಹೆಚ್ಚಿನ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗಿದೆ, ಎನ್ನುತ್ತದೆ ಅಧ್ಯಯನ.

ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?

ಕೆಲಸದಲ್ಲಿ ಗೌರವ ಸಿಗದವರಿಗಿಂತ ಗೌರವ ಸಿಗುವವರು ಹೆಚ್ಚು ಸಮಯ ಸಂಸ್ಥೆಯಲ್ಲಿ ಮುಂದುವರಿಯುತ್ತಾರೆ. ಉದ್ಯೋಗಿಗಳಿಗೆ ಸೀನಿಯರ್ ಆಫೀಸರ್ ಗೌರವಿಸಿದರೆ ಅವರು ಮಾಡುವ ಕೆಲಸದ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಈ ಅಧ್ಯಯನ ಪ್ರೂವ್ ಮಾಡಿದೆ. ಅವರಿಗೂ ಹೆಚ್ಚು ಕಲಿಯುವ, ಬೆಳವಣಿಗೆಗೆ ಅವಕಾಶವಿದ್ದರೆ ಸರ್ವತೋಮುಖ ಪ್ರಗತಿ ಸಾಧ್ಯವಾಗಿ, ಕಂಪನಿಯೂ ಬೆಳೆಯುತ್ತದೆ.

ಬಾಸ್ ಗೌರವ ಏಕೆ ಬೇಕು?

ಹೆಚ್ಚಾಗಿ ಬಾಸ್ ಏಕೆ ತಮ್ಮ ಕೆಳಗೆ ಕಾರ್ಯ ನಿರ್ವಹಿಸುವವರನ್ನು ಅಗೌರವದಿಂದ ನಡೆಸಿಕೊಳ್ಳುತಾರೆಂಬುದಕ್ಕೂ ಸಮೀಕ್ಷೆ ನಡೆಸಲಾಗಿತ್ತು.ಈ ಸಮೀಕ್ಷೆಯಲ್ಲಿ 125 ಉದ್ಯೋಗದಾತರು ಭಾಗಿಯಾಗಿದ್ದರು. ಅವರು ಹೇಳುವಂತೆ ಹೆಚ್ಚು ಕೆಲಸದ ಒತ್ತಡದಿಂದಾಗಿ ಚೆನ್ನಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಶೇ. 60 ಮಂದಿ ಹೇಳಿದ್ದರೆ. ಶೇ. 25 ಉದ್ಯೋಗಿಗಳು ನಮ್ಮ ಬಾಸ್ ನಮ್ಮ ಜೊತೆ ಹೇಗೆ ವರ್ತಿಸುತ್ತಾರೋ, ಅದರಂತೆ ನಾವೂ ಅವರೊಂದಿಗೆ ನಡೆದುಕೊಳ್ಳುತ್ತೇವೆ, ಎಂದಿದ್ದಾರೆ. 

ಒಟ್ಟಿನಲ್ಲಿ ಸಮೀಕ್ಷೆ ತಿಳಿಸುವಂತೆ ಯಾವ ವ್ಯಕ್ತಿ ಆಫೀಸಿನಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೋ ಅದರ ನೇರ ಪರಿಣಾಮ ಕೆಲಸದ ಮೇಲೆ ಬೀಳುವುದು ಗ್ಯಾರಂಟಿ. ಯಾರ ಸ್ವಾಭಿಮಾನಕ್ಕೆ ಧಕ್ಕೆಯಾಗುವುದಿಲ್ಲವೋ, ಅವರು ಎಲ್ಲೆಡೆ ಖುಷಿಯಿಂದ ಇರುತ್ತಾರೆ.