Asianet Suvarna News Asianet Suvarna News

ಸ್ನಾತಕೋತ್ತರ ಪರೀಕ್ಷೆ ರದ್ದು, ಎಲ್ಲರೂ ನೇರವಾಗಿ ಮುಂದಿನ ತರಗತಿಗೆ

ಪದವಿಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆ ರದ್ದು/ ರಾಜಸ್ಥಾನ ಸರ್ಕಾರದಿಂದ ದಿಟ್ಟ ಕ್ರಮ/ ಕೊರೋನಾ ಕಾರಣಕ್ಕೆ ಪರೀಕ್ಷೆ ಇಲ್ಲ/ ಎಲ್ಲ ವಿದ್ಯಾರ್ಥಿಗಳು ಮುಂದಿನ ತರಗತಿಗೆ

Rajasthan government cancels all UG and PG exams
Author
Bengaluru, First Published Jul 5, 2020, 2:44 PM IST

ಜೈಪುರ(ಜೂ. 05)   ರಾಜಸ್ಥಾನ ಸರ್ಕಾರ ದಿಟ್ಟ ಕ್ರಮವೊಂದನ್ನು ತೆಗೆದುಕೊಂಡಿದೆ. ಕೊರೋನಾ ಕಾರಣಕ್ಕೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದು ಮಾಡಿದೆ.

ಎಲ್ಲ ವಿಶ್ವವಿದ್ಯಾಲಯಗಳ, ತಾಂತ್ರಿಕ ವಿದ್ಯಾಲಯಗಳ ಪರೀಕ್ಷೆಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ತೇರ್ಗಡೆ ಮಾಡಲಾಗುತ್ತಿದೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀರ್ಮಾಣ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಮಾರ್ಕ್ಸ್ ಸಂಬಂಧ ಅಧಿಕೃತ ಆದೇಶ ಶೀಘ್ರವೇ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.

ಕೆಪಿಎಸ್‌ಸಿಯಲ್ಲಿ ಹೊಸ ಉದ್ಯೋಗ ಅವಲಕಾಶ, ಅರ್ಜಿ ಹಾಕಿ

ತಮ್ಮ ಟ್ವಿಟರ್ ಖಾತೆಯ ಮೂಲಕ ಅಶೋಕ್ ಮಾಹಿತಿ ನೀಡಿದ್ದಾರೆ. ಕೊರೋನಾ ಕಾರಣಕ್ಕೆ ರಾಜ್ಯ ಸರ್ಕಾರ ಪದವಿಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ರಾಜಸ್ಥಾನದ ಉನ್ನತ ಶಿಕ್ಷಣ ಸಚಿವ ಭನ್ವಾರ್ ಸಿಂಗ್ ಭಾಟಿ, ತಾಂತ್ರಿಕ ಶಿಕ್ಷಣ ಸಚಿವ ಸುಭಾಷ್ ಗಾರ್ಗ್, ಮುಖ್ಯ ಕಾರ್ಯದರ್ಶಿ ರಾಜೀವ್ ಸ್ವರೂಪ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರಂಜನ್ ಆರ್ಯಾ, ಉನ್ನತ ಶಿಕ್ಷಣ ಇಲಾಖೆ  ಕಾರ್ಯದರ್ಶಿ ಸುಚಿ ಶರ್ಮಾ, ಪಬ್ಲಿಕ್ ರಿಲೇಶನ್ ಕಮಿಷನರ್ ಮಹೇಂದ್ರ ಸೋನಿ ಸಭೆಯಲ್ಲಿ ಪಾಲ್ಗೊಂಡಿದ್ದರು. 

Rajasthan government cancels all UG and PG exams

 

 

Follow Us:
Download App:
  • android
  • ios