ಬೆಂಗಳೂರು, (ಆ.12):  2020-21 ಸಾಲಿನ ಪಿಯುಸಿಗೆ ದಾಖಲಾತಿಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು (ಬುಧವಾರ) ಆದೇಶ ಹೊರಡಿಸಿದೆ.

ನಾಳೆಯಿಂದ ಅಂದ್ರೆ ಆ.13ರಿಂದ ಪಿಯುಸಿಗೆ ವಿದ್ಯಾರ್ಥಿಗಳ ದಾಖಲಾತಿ ಆರಂಭವನ್ನು ಮಾಡಿಕೊಳ್ಳುವಂತೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಮೂಲಕ ಸೂಚಿಸಿದೆ.

ಗುರುವಾರದಿಂದ ನಾಲ್ಕು ದಿನ ಅರ್ಜಿ ನೀಡುವಂತೆ ತಿಳಿಸಿದ್ದು, ಕೊರೋನಾ ಹಿನ್ನಲೆಯಲ್ಲಿ ಖಾಸಗಿ ಕಾಲೇಜುಗಳು ಸೇರಿದಂತೆ ಎಲ್ಲಾ ಕಾಲೇಜುಗಳಿಗೆ ಕಡಿಮೆ ಶುಲ್ಕವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.

ಸೆಪ್ಟೆಂಬರ್‌ನಿಂದ ಹೈಸ್ಕೂಲ್‌ ಆರಂಭ?

ಕಳೆದ ಬಾರಿ ಶುಲ್ಕಕ್ಕಿಂತ ಈ ಬಾರಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ತೆಗದುಕೊಳ್ಳುವಂತೆ ಮತ್ತು ರೋಸ್ಟರ್‌ ಪದ್ದತಿ ಪ್ರಕಾರ ಸೀಟು ಹಂಚಿಕೆ ಮಾಡುವಂತೆ ಆದೇಶದಲ್ಲಿ ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ.

ಕಾಲೇಜು ದಾಖಲಾತಿ ಪ್ರಕ್ರಿಯೆ ಏನೋ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಕ್ಲಾಸ್ ಯಾವಾಗಿನಿಂದ ಆರಂಭ..? ಇನ್ನು ಶಾಲೆಗಳು ಯಾವಾಗಿನಿಂದ ಪ್ರಾರಂಭಿಸಬೇಕೆಂದು ಸರ್ಕಾರ ಚಿಂತನೆ ನಡೆಸಿದೆ.

ಮೊನ್ನೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದಂತೆ ಸೆಪ್ಟೆಂಬರ್‌ನಲ್ಲಿ ಶಾಲೆ ಆರಂಭಿಸುವ ಸಾಧ್ಯತೆಗಳಿವೆ. ಆದ್ರೆ, ಕೇಂದ್ರ ಸರ್ಕಾರದ ಮೇಲೆ ಅವಲಂಬಿತವಾಗಿದೆ.