ಬೆಂಗಳೂರು (ಜೂ. 22): 2019-20ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರವೇಶ ಪಡೆಯಲು ಜೂ.24ರ ವರೆಗಿದ್ದ ದಿನಾಂಕವನ್ನು ಜುಲೈ 1ರ ವರೆಗೂ ವಿಸ್ತರಿಸಲಾಗಿದೆ.

ಯಾವುದೇ ದಂಡ ಶುಲ್ಕ ಇಲ್ಲದೆ ಜುಲೈ 1ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ವಿಳಂಬ ಶುಲ್ಕ 670 ರು. ಪಾವತಿಸಿ ಜುಲೈ 8ರೊಳಗೆ, ವಿಶೇಷ ದಂಡಶುಲ್ಕ 2890 ರು. ಪಾವತಿಸಿ ಜುಲೈ 15ರ ವರೆಗೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ದಾಖಲಾತಿ ಶುಲ್ಕ ಪಾವತಿಸಿದ ತಕ್ಷಣವೇ ಅದನ್ನು ಖಜಾನೆಗೆ ಪಾವತಿಸುವುದು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.