ಬೆಂಗಳೂರು (ಆ.25):  ಖಾಸಗಿ ಶಾಲೆಗಳು 2020-21ನೇ ಸಾಲಿಗೆ ಪಡೆಯುವ ಶುಲ್ಕದ ವಿವರಗಳನ್ನು ಸೆ.30ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿ ಶಾಲಾ ವೆಬ್‌ಸೈಟ್‌ನಲ್ಲಿ ಪ್ರಕಟಿಸದಿದ್ದರೆ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಎಲ್ಲ ಖಾಸಗಿ ಶಾಲೆಗಳು ಶೈಕ್ಷಣಿಕ ಶುಲ್ಕದ ಮಾಹಿತಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ನಿಯಮವಿದೆ. ಶುಲ್ಕ ವಿವರದ ಮಾಹಿತಿ ಸಲ್ಲಿಸಲು ಸಾಕಷ್ಟುಬಾರಿ ಸಮಯ ನೀಡಲಾಗಿತ್ತು. ಆದರೂ ಇಲ್ಲಿಯವರೆಗೆ ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸಿಲ್ಲ. ಆದ್ದರಿಂದ ಸೆ.30ರೊಳಗೆ ಇಲಾಖೆಯ ತಂತ್ರಾಂಶದಲ್ಲಿ ಶುಲ್ಕದ ವಿವರ ಪ್ರಕಟಿಸದ ಶಾಲೆಗಳ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದಲ್ಲಿ (ಡೇರಾ) ಕಡ್ಡಾಯವಾಗಿ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?

ಈ ಬಗ್ಗೆ ಆಯಾ ಜಿಲ್ಲಾ ಉಪನಿರ್ದೇಶಕರು ಮೇಲ್ವಿಚಾರಣೆ ನಡೆಸಿ, ಎಲ್ಲ ಅನುದಾನ ರಹಿತ ಶಾಲೆಗಳ ಶುಲ್ಕದ ವಿವರನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಬಹುತೇಕ ಖಾಸಗಿ ಶಾಲೆಗಳು ಮಕ್ಕಳ ಪಾಲಕ, ಪೋಷಕರಿಂದ ಶುಲ್ಕ ಪಡೆಯುತ್ತಿದ್ದರೂ ವಿವರಗಳನ್ನು ಪ್ರಕಟಿಸಿಲ್ಲ. ಸರ್ಕಾರದ ಆದೇಶ ಹಾಗೂ ಆಯುಕ್ತಾಲಯದ ನಿರ್ದೇಶನ ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂದೆ ಇಂತಹ ಘಟನೆ ಮರುಕಳಿಸಿದಲ್ಲಿ, ಸಂಬಂಧಪಟ್ಟಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಇಲಾಖೆ ತಿಳಿಸಿದೆ.