ಬೆಂಗಳೂರು, [ನ.24]: ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪನಿರೀಕ್ಷಕ [ಪುರುಷ ಮತ್ತು ಮಹಿಳೆ] ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ಅರ್ಜಿ ಆಹ್ವಾನಿಸಿದೆ.

ಒಟ್ಟು 59 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಕೊನೆ ದಿನಾಂಕ ಡಿಸೆಂಬರ್ 22,2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

700 ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

ಪರೀಕ್ಷಾ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 600 ರು. ಇತರೆ ಹಿಂದುಳಿದ ವರ್ಗಗಳಾದ 3ಬಿ,ಬಿ 2ಎ,ಬಿ ಅಭ್ಯರ್ಥಿಗಗಳಿಗೆ 300 ರು.,ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರು ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ: ಅಬಕಾರಿ ಉಪನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಕಡ್ಡಾಯವಾಗಿ ಬ್ಯಾಚ್ಯುಲರ್ ಪದವಿ [ಯಾವುದಾರೂ ಡಿಗ್ರಿ] ಅಥವಾ ತತ್ಸಮಾನ ವಿದ್ಯಾರ್ಹತೆಯನ್ನ ಹೊಂದಿರಬೇಕು.

ವಯೋಮಿತಿ: ಕನಿಷ್ಠ 21. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 31 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 26, ಮಾಜಿ ಸೈನಿಕರಿಗೆ ಗರಿಷ್ಠ ಮಯೋಮಿತಿಯಲ್ಲಿ ಅವರುಗಳು ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ವರ್ಷಗಳು ಜೊತೆಗೆ 3 ವರ್ಷಗಳ ಸಡಿಲಿಕೆ ಅನ್ವಯವಾಗುತ್ತದೆ.

ಕೊನೆ ದಿನಾಂಕಗಳು: ಅರ್ಜಿ ಸಲ್ಲಿಸಲು 22-12-2018 ಕೊನೆ ದಿನವಾಗಿದ್ದು ಶುಲ್ಕ ಪಾವತಿಸಲು 24-12-2018 ಕೊನೆ ದಿನವಾಗಿರುತ್ತದೆ.

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಚೇರಿಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ