2020 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಕೊರೊನಾ ಫೀವರ್ ನಡುವೆಯೇ ಪರೀಕ್ಷೆ ಬರೆದಿದ್ದ ದ್ವಿತೀಯ ಪಿಯು ಫಲಿತಾಂಶವನ್ನು ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ  ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ದ್ವಿತೀಯ ಪಿಯು ಫಲಿತಾಂಶ: ಉಡುಪಿ ರಾಜ್ಯಕ್ಕೇ ಪ್ರಥಮ, ಬಾಲಕಿಯರದ್ದೇ ಮೇಲುಗೈ!

ಈ ವರ್ಷ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆ ಜಂಟಿ ಪ್ರಥಮ, ಕೊನೆಯ ಸ್ಥಾನ ವಿಜಯಪುರ ಜಿಲ್ಲೆಗಳು ಪಡೆದಿದೆ. ಉಳಿದ ರಾಜ್ಯಗಳು ಯಾವ ಸ್ಥಾನ ಪಡೆದಿವೆ? ಇಲ್ಲಿದೆ ಜಿಲ್ಲಾವಾರು ಫಲಿತಾಂಶ

ಪರೀಕ್ಷೆ ಫಲಿತಾಂಶ ಜೀವನ ಆಲ್ಲ

ಫೇಲ್ ಆದ ವಿದ್ಯಾರ್ಥಿಗಳು ವೇದನೆ ಮಾಡಿಕೋಳ್ಳೋದು ಬೇಡ. ಪರೀಕ್ಷೆ ಫಲಿತಾಂಶ ಜೀವನ ಆಲ್ಲ. ಪೋಷಕರು ಫಲಿತಾಂಶದ ಆಧಾರದ ಮೇಲೆ ಮಗುವಿನ ಮೇಲೆ ಅವಹೇಳ ಮಾಡಬಾರದು. ಫೇಲ್ ಆದ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಪಡೆದುಕೊಂಡಿರೋದನ್ನ ನೋಡಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

"

"