ಬೆಂಗಳೂರು(ಜು.22): ಪ್ರೌಢಶಾಲಾ ವಿದ್ಯಾರ್ಥಿಗಳ ಮಾದರಿಯಲ್ಲಿ ದ್ವಿತೀಯ ಪಿಯು ತರಗತಿ ವಿದ್ಯಾರ್ಥಿಗಳಿಗೆ ಜು.23ರಿಂದ ಯೂಟ್ಯೂಬ್‌ ಮೂಲಕ (ಪ್ರಿ ರೆಕಾರ್ಡೆಡ್‌ ವಿಡಿಯೋ) ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದ್ದಾರೆ.

ಪ್ರತಿ ದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಲಾಗುತ್ತಿದೆ. ನಿತ್ಯ ಬೆಳಗ್ಗೆ 9ರಿಂದ 12 ಗಂಟೆವರೆಗೆ ನಡೆಸಲಾಗುತ್ತದೆ. ಬೆಳಗ್ಗೆ 9ರಿಂದ 9.45, 9.45ರಿಂದ 10.30, 10ರಿಂದ 11.15, 11.15ರಿಂದ 12ರವರೆಗೆ 4 ತರಗತಿಗಳು ನಡೆಯಲಿವೆ. ಪಾಠಗಳನ್ನು https://www.youtube.com/c/dpuedkpucpa ಲಿಂಕ್‌ ಅನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಬೇಕು.

ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಇಲ್ಲದಿರುವ ಹಾಗೂ ಇಂಟರ್‌ನೆಟ್‌ ಸೌಲಭ್ಯ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾದ ನಂತರ ಆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪಾಠಗಳನ್ನು ಉಪನ್ಯಾಸಕರ ಮೂಲಕ ಬೋಧನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವೇಳಾಪಟ್ಟಿ

ಜು.23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್‌) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ /ರಾಜ್ಯಶಾಸ್ತ್ರ (ನೋಟ್ಸ್‌)

ಜು.24: ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ಜೀವಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌ (ನೋಟ್ಸ್‌) ಗಣಿತ/ಅರ್ಥಶಾಸ್ತ್ರ ಗಣಿತ/ಅರ್ಥಶಾಸ್ತ್ರ (ನೋಟ್ಸ್‌)

ಜು.25: ಗಣಿತ/ಇತಿಹಾಸ ಗಣಿತ/ಇತಿಹಾಸ (ನೋಟ್ಸ್‌) ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌

ಜು.27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌ ಕಂಪ್ಯೂಟರ್‌ ಸೈನ್ಸ್‌/ ಸಮಾಜಶಾಸ್ತ್ರ ನೋಟ್ಸ್‌

ಜು.28: ಬೇಸಿಕ್‌ ಮ್ಯಾಥ್‌್ಸ/ ಸಮಾಜಶಾಸ್ತ್ರ ನೋಟ್ಸ್‌ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌

ಜು.29: ಇಂಗ್ಲಿಷ್‌ ನೋಟ್ಸ್‌ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್‌

ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌

ಜು.31: ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ನೋಟ್ಸ್‌ ಗಣಿತ/ಅರ್ಥಶಾಸ್ತ್ರ ನೋಟ್ಸ್‌

ಆ.1: ಗಣಿತ/ಇತಿಹಾಸ ನೋಟ್ಸ್‌ ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌

ಕೊರೋನಾ ಸೋಂಕು ಪ್ರಕರಣಗಳು ಹರಡುತ್ತಿರುವುದರಿಂದ ಕಾಲೇಜುಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ. ದ್ವಿತೀಯ ಪಿಯುಸಿ ತರಗತಿಗಳು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ ಯೂಟ್ಯೂಬ್‌ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ನೋಟ್ಸ್‌ಗಳನ್ನು ಸಿದ್ಧಪಡಿಸುವುದು ಆಯಾ ಕಾಲೇಜಿನ ಉಪನ್ಯಾಸಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆಗಳು

ಪ್ರತಿ ಕಾಲೇಜಿನ ಸಂಯೋಜಕರು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ವಿಡಿಯೋಗಳನ್ನು ತಲುಪಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕವೂ ಸಂಪರ್ಕಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಬೇಕು. ನಿಗದಿತ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ತಪ್ಪದೇ ತಲುಪಿಸಬೇಕು.

ಪ್ರತಿ ದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಬೇಕು. ಪ್ರತಿ ವಿಷಯಕ್ಕೆ ಎರಡು ಅವಧಿಗಳು, ಒಂದು ಅವಧಿಯ ವಿಡಿಯೋ ತರಗತಿ ಮತ್ತು ನಂತರದ ತರಗತಿಗಳಲ್ಲಿ ವಿಡಿಯೋ ತರಗತಿಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ, ನೋಟ್ಸ್‌ ತಯಾರಿ, ಬರವಣಿಗೆ ಕೆಲಸಗಳನ್ನು ಮಾಡಬೇಕು.

ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಐದು ಅಥವಾ ಹತ್ತು ಉಪನ್ಯಾಸಕರು ಅಥವಾ ಸಂಪನ್ಮೂಲ ವ್ಯಕ್ತಿಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಇದನ್ನು ಪ್ರಾಂಶುಪಾಲರು ನಿರ್ವಹಿಸಬೇಕು.