ಕರ್ನಾಟಕ ಸಿಇಟಿ ಪರೀಕ್ಷೆ 2020: ವೇಳಾಪಟ್ಟಿ ಪ್ರಕಟ
2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯ ದಿನಾಂಕ ಪ್ರಕಟವಾಗಿದ್ದು, ಇದೀಗ ವೇಳಾಪಟ್ಟಿಯೂ ಸಹ ಬಿಡುಗಡೆಯಾಗಿದೆ.
ಬೆಂಗಳೂರು, (ಮೇ.13): ಇದೇ ಜುಲೈ 30 ಮತ್ತು 31ರಂದು ಘೋಷಣೆಯಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇಂದು (ಬುಧವಾರ) ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಸಿಇಟಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದರು. ಇದೀಗ ಪರೀಕ್ಷಾ ವೇಳಾಪಟ್ಟಿಯನ್ನು ಅವರು ಸಾಮಾಜಿಕಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.
CET ಪರೀಕ್ಷೆಗೆ ಜುಲೈನಲ್ಲಿ ಡೇಟ್ ಫಿಕ್ಸ್..!
ಕರ್ನಾಟಕ ಸರ್ಕಾರದ ನಿರ್ದೇಶನದ ಅನ್ವಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲನೇ ವರ್ಷದ/ಮೊದಲ ಸೆಮಿಸ್ಟರ್ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ ಕೋರ್ಸ್ ಮತ್ತು ಬಿ-ಫಾರ್ಮ್ ಮತ್ತು ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ನಡೆಸಲಿದೆ.
ಮೊದಲು ಏಪ್ರಿಲ್ 22 ಮತ್ತು 23ರಂದು ಸಿಇಟಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ ಮಾಡಲಾಗಿತ್ತು. ಆದರೆ, ಕೊರೊನಾ ಹಡರದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಪರೀಕ್ಷೆಯನ್ನು ಮೂಂದೂಡಲಾಗಿತ್ತು. ಇದೀಗ ಹೊಸ ವೇಳಾಪಟ್ಟಿ ಪ್ರಕಟವಾಗಿದೆ.
ವೇಳಾಪಟ್ಟಿ ಇಂತಿದೆ.
* 30/7/2020 ಗುರುವಾರ ಬೆಳಗ್ಗೆ 10.30ರಿಂದ 11.50 ಜೀವಶಾಸ್ತ್ರ (60 ಅಂಕ), ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ (60 ಅಂಕ).
*31/7/2020 ಶುಕ್ರವಾರ ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ (60 ಅಂಕ), ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನ ಶಾಸ್ತ್ರ (60 ಅಂಕಗಳು)
* 1/8/2020 ಶನಿವಾರ ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರ ವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ (50 ಅಂಕಗಳು)