Asianet Suvarna News Asianet Suvarna News

ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಅಶ್ವತ್ಥ ನಾರಾಯಣ ಘೋಷಣೆ

ಉನ್ನತ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಸಹಭಾಗಿತ್ವ ಸಾಧಿಸುವ ಅವಕಾಶಗಳನ್ನು ಗುರುತಿಸುವ ಕುರಿತು ಕಾಮನ್ ವೆಲ್ತ್ ಆಫ್ ಪೆನ್ಸಿಲ್ವೇನಿಯಾದ ವಿಶೇಷ ರಾಯಭಾರಿಯಾದ ಕನ್ನಿಕಾ ಚೌಧರಿ ಅವರೊಂದಿಗೆ ಶುಕ್ರವಾರ ಚರ್ಚಿಸಿದ ನಂತರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೀಗೆ ಹೇಳಿದರು.

Karnataka govt tie up with Pennsylvania For Skills Education Says Dycm Ashwath Narayan
Author
Bengaluru, First Published Aug 14, 2020, 10:25 PM IST

ಬೆಂಗಳೂರು, (ಆ.14): ಶಿಕ್ಷಕರ ತರಬೇತಿ, ಕೌಶಲ ಶಿಕ್ಷಣ ತರಬೇತಿ, ವೈದ್ಯಕೀಯ ಶಿಕ್ಷಣ, ಪೊಲೀಸ್ ತರಬೇತಿ ಸೇರಿದಂತೆ ಇನ್ನೂ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಮೆರಿಕದ ಪೆನ್ಸಿಲ್ವೇನಿಯಾದೊಂದಿಗೆ ಶೀಘ್ರವೇ ಸಹಭಾಗಿತ್ವ ಮಾಡಿಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಉನ್ನತ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಸಹಭಾಗಿತ್ವ ಸಾಧಿಸುವ ಅವಕಾಶಗಳನ್ನು ಗುರುತಿಸುವ ಕುರಿತು ಕಾಮನ್ ವೆಲ್ತ್ ಆಫ್ ಪೆನ್ಸಿಲ್ವೇನಿಯಾದ ವಿಶೇಷ ರಾಯಭಾರಿಯಾದ ಕನ್ನಿಕಾ ಚೌಧರಿ ಅವರೊಂದಿಗೆ ಶುಕ್ರವಾರ ಚರ್ಚಿಸಿದ ನಂತರ ಅವರು ಹೀಗೆ ಹೇಳಿದರು.

ಸದ್ಯಕ್ಕೆ ಶಾಲೆ ಇಲ್ಲ: ಪ್ರೌಢ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಕಾರ್ಯಕ್ರಮ...!

ಶಿಕ್ಷಣದ ಮಟ್ಟವನ್ನು ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಕೌಶಲ ಮೈಗೂಡುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಗಮದಲ್ಲಿರಿಸಿಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಮುನ್ನಡೆಸಲು ಪೆನ್ಸಿಲ್ವೇನಿಯಾದೊಂದಿಗಿನ ಸಹಭಾಗಿತ್ವ ಪೂರಕವಾಗಲಿದೆ ಎಂದು ಉಪಮುಖ್ಯಮಂತ್ರಿ ವಿವರಿಸಿದರು.

ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಶಿಕ್ಷಕರ ತರಬೇತಿ ಅಕಾಡೆಮಿ ನಿರ್ದೇಶಕ ಡಾ.ಶಿವಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ಗೌಡ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಜೀವನೋಪಾಯ ಮಿಷನ್‌ ನಿರ್ದೇಶಕ ಡಾ.ರೇಜು ಮತ್ತಿತರರು ಸಭೆಯಲ್ಲಿದ್ದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅವರು ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios