ಬೆಂಗಳೂರು, (ಜೂನ್.28): ಆನ್‌ಲೈನ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು,  1 ರಿಂದ 10 ನೇ ತರಗತಿವರೆಗೆ ಆನ್ ಲೈನ್ ಕ್ಲಾಸ್ ನಡೆಸಲು ಆದೇಶ ಹೊಸರಿಡಿದೆ.

ಸೂಕ್ತ ಮಾರ್ಗಸೂಚಿಯೊಂದಿಗೆ 1 ರಿಂದ 10 ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳಿಗೆ ಸೂಚನೆ ನೀಡಿದೆ.  ಈ ಮಾರ್ಗಸೂಚಿಯು ಅಂತಿಮ ಮಾರ್ಗಸೂಚಿ ನಿಯಮಾವಳಿ ಬರುವವರೆಗೆ ಮಾತ್ರ ಜಾರಿಯಲ್ಲಿರಲಿದೆ. 

ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆ​ಗೆ ಆನ್‌ಲೈನ್‌, ಆಫ್‌ಲೈನ್‌ ಪಾಠ ರದ್ದು

ಅಲ್ಲದೆ ಈ ಆನ್ ಲೈನ್ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಆನ್‌ಲೈನ್ ಕ್ಲಾಸ್ ಮಾರ್ಗಸೂಚಿಗಳು
1) 1 ರಿಂದ 5 ನೇ ತರಗತಿಗೆ ವಾರದಲ್ಲಿ 3 ದಿನ ಕ್ಲಾಸ್

2) 6 ರಿಂದ 8 ನೇ ತರಗತಿಗೆ ವಾರದಲ್ಲಿ 5 ದಿನ ಕ್ಲಾಸ್

3) 9 ರಿಂದ 10 ನೇ ತರಗತಿಗೆ ವಾರದಲ್ಲಿ 5 ದಿನ ಕ್ಲಾಸ್

4) 30 ರಿಂದ 45 ನಿಮಿಷಗಳ ಕಾಲ ತರಗತಿ ನಡೆಸಲು ಸೂಚನೆ

5) ವಾರದಲ್ಲಿ  1  ದಿವಸ ಪೋಷಕರ ಜೊತೆ ಸಭೆ

ಮೊದಲಿಗೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣವನ್ನು ಸ್ವತಃ ರಾಜ್ಯ ಸರ್ಕಾರವೇ ರದ್ದುಪಡಿಸಿತ್ತು.  ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಹೈಕೋರ್ಟ್ ತಜ್ಞರ  ವರದಿ ಬರುವವರೆಗೆ ಸೀಮಿತ  ಆನ್ ಲೈನ್ ಶಿಕ್ಷಣ ನೀಡುವ ವಿಚಾರವನ್ನು ಸರ್ಕಾರ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು ಇದರ ಹಿನ್ನೆಲೆಯಲ್ಲಿ ಸರ್ಕಾರವೀಗ ಹೊಸ ಮಧ್ಯಂತರ  ಮಾರ್ಗಸೂಚಿ ಹೊರಡಿಸಿದೆ.

ಇನ್ನು ಶಾಲೆಗಳು ಆಗಸ್ಟ್ ಎರಡನೇ ವಾರದಲ್ಲಿ ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ.