Asianet Suvarna News Asianet Suvarna News

ಪ್ರಥಮ ಪಿಯು ಫಲಿತಾಂಶ ಮೇ 5ಕ್ಕೆ , ಶಿಕ್ಷಣ ಇಲಾಖೆ ಸುತ್ತೋಲೆ

ಲಾಕ್ ಡೌನ್ ನಡುವೆ ಶಿಕ್ಷಣ ಇಲಾಖೆಯಿಂದ ಬಂದ ಸುದ್ದಿ/ ಮೇ 5 ರಂದು ಪ್ರಥಮ ಪಿಯು ಫಲಿತಾಂಶ/ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ/ ಶುಲ್ಕ ಹೆಚ್ಚಳ ಮಾಡಿದರೆ ಕಠಿಣ ಕ್ರಮ

karnataka 1st puc result class 11th result will be published on may 5
Author
Bengaluru, First Published Apr 30, 2020, 10:07 PM IST

ಬೆಂಗಳೂರು(ಏ. 30)  ಲಾಕ್ ಡೌನ್ ನಡುವೆಯೂ ಶಿಕ್ಷಣ ಇಲಾಖೆ ಮಾತ್ರ ಸದಾ ಕಾರ್ಯನಿರತವಾಗಿದೆ. ಮೇ 5 ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜು‌ಮಟ್ಟದಲ್ಲಿಯೇ ನಿರ್ವಹಿಸಲು‌ ಮಾನದಂಡಗಳನ್ನು ಮುಂದೆ ತಿಳಿಸಲಾಗುವುದು ಎಂದು ಹೇಳಲಾಗಿದೆ.  ಖಾಸಗಿ ಕಾಲೇಜುಗಳು ಈ ಸಾಲಿನಲ್ಲಿ‌ ಶುಲ್ಕ ಹೆಚ್ಚಿಸುವ ಹಾಗಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ.

10, 12ನೇ ತರಗತಿ ಪರೀಕ್ಷೆಗೆ ಸಿದ್ಧತೆ, ಎಚ್ಚರವಾಗಿರಿ

ಖಾಸಗಿ ಪಿಯು ಕಾಲೇಜುಗಳು ಇಂತಹ ಸಾಮಾಜಿಕ ಸಂಕಷ್ಟದ ಸಂದರ್ಭ ದಲ್ಲಿ ಅಸಹಾಯಕ ಪೋಷಕರಿಂದ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಒತ್ತಾಯಿಸಬಾರದು.  ಇಚ್ಛಿಸುವ ಪೋಷಕರಿಂದ ಕಂತುಗಳ ಮೂಲಕ ಸ್ವೀಕರಿಸಬೇಕು ಎಂದು ಹಿಂದೆ ತಿಳಿಸಿದ್ದ ಆದೇಶವನ್ನೇ ಮತ್ತೆ ನೆನಪು ಮಾಡಿಕೊಟ್ಟಿದೆ.  020-21 ನೇ ಈ ಸಾಲಿಗೆ ಯಾವುದೇ ಕಾರಣಕ್ಕೂ ಬೋಧನ ಶುಲ್ಕವನ್ನು ಹೆಚ್ಚಿಸಬಾರದೆಂದು ಇಲಾಖೆಯು ನಿರ್ದೇಶನ ನೀಡಿದೆ.

ಒಂದು ವೇಳೆ ಈ ಬಗ್ಗೆ ದೂರುಗಳು ಬಂದಲ್ಲಿ, ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದು ಹೇಳಿದೆ. ದ್ವಿತೀಯ ಪಿಯು ಪರೀಕ್ಷೆಗಳು ಸಹ ಲಾಕ್ ಡೌನ್ ಆತಂಕದ ನಡುವೆಯೇ ನಡೆದಿದ್ದವು. ಕೊನೆಯ ಒಂದು ಪರೀಕ್ಷೆ ಬಾಕಿ ಉಳಿದುಕೊಂಡಿತ್ತು. 

Follow Us:
Download App:
  • android
  • ios