ಬೆಂಗಳೂರು, (ಏ.29): ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗಿದ್ದು, ಅದೆಷ್ಟೋ ಕೈಗಳಿಗೆ ಕೆಲಸವಿಲ್ಲದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಗಿದೆ.

ಇದರಿಂದ ಜನರ ಆರ್ಥಿಕ ಮೇಲೂ ಭಾರೀ ಹೊಡೆತ ಕೊಟ್ಟಿದ್ದು, ಮನೆ ಬಾಡಿಗೆ, ಮಕ್ಕಳ ಶಾಲೆ ಫೀ ಕಟ್ಟಲು ಪರದಾಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಶುಲ್ಕ ಹೆಚ್ಚಳ ಮಾಡದಂತೆ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದೆ.

ಲಾಕ್‌ಡೌನ್: ಕೆಲ್ಸ ಇಲ್ಲ...ಹಣವಿಲ್ಲ...ಆದ್ರೂ ಫೀ ಕಟ್ಟುವಂತೆ ಶಾಲೆ ಆರ್ಡರ್

ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಹೆಚ್ಚಳ ಮಾಡದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈಗ ಇರುವ ಶಾಲಾ ಶುಲ್ಕವನ್ನು ಮುಂದುವರೆಸಬೇಕು ಅಥವಾ ಕಡಿಮೆ ಶುಲ್ಕ ಪಡೆಯಬೇಕು ಎಂದು ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳಿಗೆ ಸೂಚಿಸಿದೆ.

ಪ್ರತಿವರ್ಷ ಶೇಕಡ 15ರಷ್ಟು ಶುಲ್ಕ ಏರಿಕೆ ಮಾಡಲು ಅವಕಾಶ ಇತ್ತು. ಈಗ ಶುಲ್ಕ ಹೆಚ್ಚಳ ಮಾಡದೇ ಪೋಷಕರ ಇಚ್ಛೆಯಂತೆ ಶುಲ್ಕ ಪಡೆದುಕೊಳ್ಳಲು ಸೂಚಿಸಿದೆ.

ಆದೇಶವನ್ನು ಉಲ್ಲಂಘಿಸಿ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ಸಹ ಕೊಟ್ಟಿದೆ.

ಲಾಕ್‌ಡೌನ್‌ ಮಧ್ಯೆ ಹಣವಿಲ್ಲದೇ ಪರದಾಡುತ್ತಿರುವಾಗ ಮಕ್ಕಳ ಫೀ ಕಟ್ಟುವಂತೆ ಕೆಲ ಕಾಸಗಿ ಶಾಲೆಗಳು ಮೆಸೇಜ್ ಕಳುಹಿಸುತ್ತಿದೆ. ಸರ್ಕಾರ ಎಷ್ಟು ವಾರ್ನ್ ಮಾಡಿದ್ರೂ ಶಾಲೆಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದೀಗ ಹೊಸ ಸೂಚನೆಯೊಂದು ಹೊರಡಿಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಏನು ಮಾಡುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.