ಬೆಂಗಳೂರು, (ಜುಲೈ.25): ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) COMEDK UGET 2020 ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಪದವಿ ಪ್ರವೇಶ ಪರೀಕ್ಷೆ ಇದೇ ಆಗಸ್ಟ್ 19 ರಂದು ನಡೆಯಲಿದೆ. ಈ ಮೊದಲು ಒಕ್ಕೂಟವು ಜುಲೈ 25 ರಿಂದ ಆಗಸ್ಟ್ 1 ರವರೆಗೆ ಪರೀಕ್ಷೆಗಳನ್ನು ಮರು ನಿಗದಿಪಡಿಸಿತ್ತು.

ಕಾಮೆಡ್ -ಕೆ ಯುಜಿಇಟಿ – 2020 ಪರೀಕ್ಷೆ ಮತ್ತೆ ಮುಂದೂಡಿಕೆ

ಪ್ರವೇಶ ಪರೀಕ್ಷೆ 2 ಅವಧಿಯಲ್ಲಿ ನಡೆಯಲಿದ್ದು, ಪರೀಕ್ಷೆಯ ಒಟ್ಟು ಅವಧಿ 3 ತಾಸು. ಮೊದಲ ಅವಧಿ ಬೆಳಗ್ಗೆ 9 ರಿಂದ 12 ರವರೆಗೆ ಮತ್ತು 2ನೇ ಅವಧಿ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿವೆ.

ಕೋವಿಡ್​​ನಿಂದಾಗಿ ಆರೋಗ್ಯದ ದೃಷ್ಟಿಯಿಂದ, ಒಕ್ಕೂಟದ ಸಹಾಯವಾಣಿ ಈಗ ಬಂದ್​ ಆಗಿದ್ದು, ಎಲ್ಲ ವಿಚಾರಣೆಗಳಿಗೆ/ ಪ್ರಶ್ನೆಗಳಿಗೆ ಇಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು. ವಿಚಾರಣೆ / ಪ್ರಶ್ನೆಗಳಿದ್ದಲ್ಲಿ studenthelpdesk@comedk.org ಗೆ ತಿಳಿಸಬಹುದು ಎಂದು COMDEK ಪ್ರಕಟಣೆಯಲ್ಲಿ ತಿಳಿಸಿದೆ.