ಬೆಂಗಳೂರು (ಆ.25):  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ-2020ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ವೇಳಾಪಟ್ಟಿಪ್ರಕಟಿಸಿದೆ. ಸೆ.2ರಿಂದ ಸೆ.27ರ ವರೆಗೆ ರ‍್ಯಾಂಕ್ ಪ್ರಕಾರವಾಗಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸೂಚಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕವೇ ದಾಖಲೆ ಪರಿಶೀಲನೆ ನಡೆಸಲು ಕೆಇಎ ನಿರ್ಧರಿಸಿದೆ. ಅಭ್ಯರ್ಥಿಗಳು ವೇಳಾಪಟ್ಟಿಅನುಸಾರವಾಗಿ ಪಿಡಿಎಫ್‌ ರೂಪದಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್‌ ಆಯ್ಕೆ ಮಾಡಿ ಶೈಕ್ಷಣಿಕ ಹಾಗೂ ಮೀಸಲಾತಿ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡಬೇಕು. ಇದರ ವಿಧಾನವನ್ನು ಶೀಘ್ರದಲ್ಲೇ ಕೆಇಎ ಪ್ರಕಟಿಸಲಿದೆ. 

ರಾಷ್ಟ್ರೀಯ ನೇಮಕಾತಿ ಏಜೆನ್ಸಿಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ..

ಆಯಾ ರ‍್ಯಾಂಕ್‌ಗಳಲ್ಲಿ ನಿಗದಿಪಡಿಸಿರುವ ದಿನಾಂಕಗಳಲ್ಲಿ ಮಾತ್ರ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ http://kea.kar.nic.in ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಟಾಪರ್ಸ್‌ ಪಟ್ಟಿ!..

ವೇಳಾಪಟ್ಟಿ:

ಸೆ.2ಮತ್ತು 3- ‌ 1ರಿಂದ 2,000

ಸೆ.4ರಿಂದ 6- 2,001- 7,000

ಸೆ.7ರಿಂದ 9- 7001ರಿಂದ 15,000

ಸೆ.10ರಿಂದ 12- 15,001ರಿಂದ 25,000

ಸೆ.13ರಿಂದ 15- 25,001ರಿಂದ 40,000

ಸೆ.16ರಿಂದ19- 40,001ರಿಂದ 70,000

ಸೆ.20ರಿಂದ23- 70,001ರಿಂದ 1,00,000

ಸೆ.24ರಿಂದ 27- ಕೊನೆಯ ರ‍್ಯಾಂಕ್‌ವರೆಗಿನ ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಬಹುದು.