Asianet Suvarna News Asianet Suvarna News

ಸಿಇಟಿ ಕೀ ಉತ್ತರ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಆ.8ರ ವರೆಗೆ ಅವಕಾಶ

ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಗಳನ್ನು ಪರೀಕ್ಷಾ ಪ್ರಾಧಿಕಾರ ನೇರವಾಗಿ ಪಡೆದುಕೊಳ್ಳಲಿದೆ|ಉಳಿದ 12ನೇ ತರಗತಿ ಸಿಬಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳು), ಸಿಐಎಸ್‌ಸಿಇ ಸೇರಿದಂತೆ 10+2 ಬೋರ್ಡ್‌ಗಳಲ್ಲಿ ಶಿಕ್ಷಣ ಪೂರೈಸಿದವರು ಅಂಕಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನ ನಿಗದಿತ ಲಿಂಕ್‌ನಲ್ಲಿ ಆ.8ರೊಳಗೆ ದಾಖಲಿಸಬೇಕು|

CET Key Answer Published on Website
Author
Bengaluru, First Published Aug 5, 2020, 12:22 PM IST

ಬೆಂಗಳೂರು(ಆ.05): ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ- 2020ರ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಲಾಗಿದೆ. ಪ್ರಕಟಿಸಿರುವ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತವಾಗಿ ಆನ್‌ಲೈನ್‌ ಮೂಲಕ ಆ.8ರ ಸಂಜೆ 5.30 ರೊಳಗೆ ಸಲ್ಲಿಸಬಹುದು.

ಕೊರೋನಾ ಭೀತಿ: 'ಸಿಇಟಿ ನಡೆಸಲು ಯಾವುದೇ ಸಮಸ್ಯೆ ಇಲ್ಲ'

ಆಕ್ಷೇಪಣೆಗಳನ್ನು ವಿಷಯದ ಹೆಸರು, ವರ್ಷನ್‌ ಕೋಡ್‌, ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ ಸಹಿತ ವಿವರಗಳೊಂದಿಗೆ ಸಲ್ಲಿಸಬೇಕು. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್‌ ಕೋಡ್‌ ನಮೂದಿಸದೆ ಅಥವಾ ಆಧಾರ ರಹಿತವಾಗಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳು ಅಂತಿಮವಾಗಿರುತ್ತವೆ.

ಅಂಕ ನಮೂದಿಸಲು ಸೂಚನೆ:

ರಾಜ್ಯ ಪಿಯು ಇಲಾಖೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಗಳನ್ನು ಪರೀಕ್ಷಾ ಪ್ರಾಧಿಕಾರ ನೇರವಾಗಿ ಪಡೆದುಕೊಳ್ಳಲಿದೆ. ಆದರೆ, ಉಳಿದ 12ನೇ ತರಗತಿ ಸಿಬಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳು), ಸಿಐಎಸ್‌ಸಿಇ ಸೇರಿದಂತೆ 10+2 ಬೋರ್ಡ್‌ಗಳಲ್ಲಿ ಶಿಕ್ಷಣ ಪೂರೈಸಿದವರು ಅಂಕಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನ ನಿಗದಿತ ಲಿಂಕ್‌ನಲ್ಲಿ ಆ.8ರೊಳಗೆ ದಾಖಲಿಸಬೇಕು. ಪೂರಕ ಪರೀಕ್ಷೆ ಬರೆಯುವವರು ಕೂಡ ಅಂಕಗಳನ್ನು ದಾಖಲಿಸುವಂತೆ ಸೂಚಿಸಿದೆ. ಹೆಚ್ಚಿನ ಮಾಹಿತಿ ಹಾಗೂ ಕೀ ಉತ್ತರಗಳಿಗೆ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನೋಡಬಹುದು.
 

Follow Us:
Download App:
  • android
  • ios