Asianet Suvarna News Asianet Suvarna News

CAA ಹಿಂಸಾಚಾರ ಪರಿಣಾಮ, CBSE ಪರೀಕ್ಷೆ ಮುಂದೂಡಿಕೆ

ಸಿಎಎ- ಪರ ವಿರೋಧದ ಹೋರಾಟಕ್ಕೆ ಈಶಾನ್ಯ ದೆಹಲಿ ತತ್ತರಿಸಿ ಹೋಗಿದೆ. ಗಲಭೆಕೋರರ ಕ್ರೌರ್ಯಕ್ಕೆ ಇಂದು ಮತಷ್ಟು ಜನರು ಪ್ರಾಣ ತೆತ್ತಿದ್ದಾರೆ. ಈಶಾನ್ಯ ದೆಹಲಿ ಅಕ್ಷರಶಃ ಸ್ಮಶಾನ ಮೌನ ಆವರಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿಂಸಾಚಾರದ ಪರಿಣಾಮ  ಸಿಬಿಎಸ್​ಇ ಪರೀಕ್ಷೆ ಮೇಲೆ ಬೀರಿದೆ.

CBSE postpones class 12 English exams at Delhi over CAA violence
Author
Bengaluru, First Published Feb 26, 2020, 8:20 PM IST

ನವದೆಹಲಿ, [ಫೆ.26]: ಈಶಾನ್ಯ ದೆಹಲಿ ಹಿಂಸಾಚಾರ ಸಿಬಿಎಸ್​ಇ ಪರೀಕ್ಷೆಗಳ ಮೇಲೆ ಕೂಡ ಪರಿಣಾಮ ಬೀರಿದೆ. ನಾಳೆ ಅಂದ್ರೆ ಫೆ.27ರಂದು ನಡೆಯಬೇಕಿದ್ದ ಸಿಬಿಎಸ್​ಇ ಇಂಗ್ಲಿಷ್ ಪರೀಕ್ಷೆಗಳನ್ನು ದೆಹಲಿಯ 80 ಕೇಂದ್ರಗಳಲ್ಲಿ ಮುಂದೂಡಲಾಗಿದೆ.

 ರಾಷ್ಟ್ರ ರಾಜಧಾನಿಯ ಇತಿಹಾಸದಲ್ಲಿಯೇ ಅತ್ಯಂತ ಭಯಾಕನ ಗಲಭೆಗೆ ದೆಹಲಿ ಸಾಕ್ಷಿಯಾಗಿದೆ. ಅದರಲ್ಲಿಯೂ ಈಶಾನ್ಯ ದೆಹಲಿಯಲ್ಲಿ ಕಳೆದ 3 ದಿನಗಳಿಂದ ನಡೆದ ಹಿಂಸಾಚಾರ ಘನಘೋರವಾಗಿದೆ.ಈ ಹಿನ್ನೆಲೆಯಲ್ಲಿ ಸಿಬಿಎಸ್​ಇ ಪರೀಕ್ಷೆಗಳನ್ನ ಮುಂದೂಡಲಾಗಿದೆ.

ದೆಹಲಿ ನಿಯಂತ್ರಣಕ್ಕೆ ಅಖಾಡಕ್ಕಿಳಿದ ಸರ್ಜಿಕಲ್ ಹೀರೋ..ಕುತಂತ್ರಿಗಳಿಗೆ ಸಾವೇ ಗತಿ!

ಇಂದು [ಬುಧವಾರ] ಕೂಡ ಪರೀಕ್ಷೆಯಿತ್ತು. ಆದರೆ ಫೆ.25ರಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅದನ್ನು ಮುಂದೂಡಿ ನೋಟಿಸ್ ಹೊರಡಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಫೆ.27ರಂದು ನಡೆಯಬೇಕಿದ್ದ ಇಂಗ್ಲಿಷ್​ ಪರೀಕ್ಷೆಯನ್ನು ಈಶಾನ್ಯ ದೆಹಲಿಯ 73 ಹಾಗೂ ಪೂರ್ವ ದೆಹಲಿಯ 7 ಕೇಂದ್ರಗಳಲ್ಲಿ ಮುಂದೂಡಿದೆ.

ವಿದ್ಯಾರ್ಥಿಗಳಿಗೆ, ಪರೀಕ್ಷಾ ಸಿಬ್ಬಂದಿಗೆ, ಪಾಲಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿ ಸರ್ಕಾರ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿತ್ತು. ಹಾಗಾಗಿ ಕೇಂದ್ರೀಯ ಪೌಢ ಶಿಕ್ಷಣ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್​ ತ್ರಿಪಾಠಿ ತಿಳಿಸಿದ್ದಾರೆ.

 ದೆಹಲಿಯಲ್ಲಿ ಗಲಭೆ ನಿಯಂತ್ರಣಕ್ಕೆ ಬಂದರೂ ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಮಂಗಳವಾರ 13 ಇದ್ದ ಸಾವಿನ ಸಂಖ್ಯೆ ಇಂದು [ಬುಧವಾರ] 23ಕ್ಕೆ ಏರಿಕೆಯಾಗಿದೆ.. ಅದರಲ್ಲೂ ಇವತ್ತು ಗುಪ್ತಚರ ಇಲಾಖೆ ಅಧಿಕಾರಿಯ ಶವವಾಗಿ ಪತ್ತೆಯಾಗಿದ್ದು.. ದಿಲ್ಲಿ ಗಲಭೆ ಕರಾಳತೆಗೆ ಮತ್ತೊಂದು ಪುಟ ಸೇರ್ಪಡೆಯಾದಂತಾಗಿದೆ. 

ಇನ್ನು ದೆಹಲಿಯಲ್ಲಿ ಹಿಂಸಾಚಾರವನ್ನು ಹತೋಟಿಗೆ ತರುವ ಹೊಣೆಯನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರನ ಅಜೀತ್ ದೋವಲ್ ಹೆಗಲಿಗೆ ಹಾಕಿದ್ದು, ಅವರು ಹಿಂಸಾಚಾರ ನಡೆದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿಯನ್ನು ಕಂಟ್ರೋಲ್ ಗೆ ತರಲು ಕಸರತ್ತು ನಡೆಸಿದ್ದಾರೆ.

ಸರ್ಕಾರ ಮತ್ತು ಪೊಲೀಸರಿಗೆ ದೆಹಲಿ ಹೈಕೋರ್ಟ್ ತರಾಟೆ:

"

Follow Us:
Download App:
  • android
  • ios