ನವದೆಹಲಿ, (ಜುಲೈ.29): ಕೇಂದ್ರ ಸಚಿವ ಸಂಪುಟ ಬುಧವಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅಂಗೀಕಾರ ನೀಡಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯವೆಂದು ಮರುನಾಮಕರಣ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ

ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡಲು ಒಪ್ಪಿಗೆ ಸಿಕ್ಕಿದೆ.

ಹೊಸ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅದರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

ಒಂದು ಪ್ರಮುಖ ಬೆಳವಣಿಗೆಯಲ್ಲಿ, ಎನ್‌ಇಪಿ 2020 ರ ಕರಡಿನ ಶಿಫಾರಸುಗಳ ಆಧಾರದ ಮೇಲೆ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವನ್ನು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕರಡು ನೀತಿಯು ಶಿಕ್ಷಣ ಮತ್ತು ಕಲಿಕೆಯತ್ತ ಗಮನ ಹರಿಸಲು ಬದಲಾವಣೆಯನ್ನು ಸೂಚಿಸಿತು. 

ಆ ನಿಟ್ಟಿನಲ್ಲಿ, ಹೆಸರನ್ನು ಶಿಕ್ಷಣ ಸಚಿವಾಲಯ (ಎಂಒಇ) ಎಂದು ಮರುನಾಮಕರಣ ವರದಿಗಳ ಪ್ರಕಾರ, ಮೂರು ದಶಕಗಳ ಹಳೆಯ ನೀತಿಯನ್ನು ಬದಲಾಯಿಸುವ ಹೊಸ ಶಿಕ್ಷಣ ನೀತಿಯ ಕರಡನ್ನು ಕ್ಯಾಬಿನೆಟ್ ಅಂಗೀಕರಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986 ರಲ್ಲಿ ಅಂಗೀಕರಿಸಲಾಯಿತು ಮತ್ತು ಕೊನೆಯ ಬಾರಿಗೆ ಅದನ್ನು 1992 ರಲ್ಲಿ ಮಾರ್ಪಡಿಸಲಾಗಿತ್ತು.
2030 ರ ವೇಳೆಗೆ 3-18 ವರ್ಷದೊಳಗಿನ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಗಮನಹರಿಸುವ ಎನ್‌ಇಪಿ ಕರಡನ್ನು ಮೋದಿ ಸರ್ಕಾರ 2019 ರ ಮೇ ತಿಂಗಳಲ್ಲಿ ಮಂಡಿಸಿತು.