ಭೂತದ ಕಾಟದ ರೋಗಿಗಳ ಚಿಕಿತ್ಸೆಗೆ ಬಂತು ಕೋರ್ಸ್!
ಬನಾರಸ್ ವಿವಿಯಿಂದ ಭೂತ ವಿದ್ಯೆ ಕೋರ್ಸ್!| ಈ ರೀತಿಯ ಕೋರ್ಸ್ ದೇಶದಲ್ಲೇ ಮೊದಲು
ವಾರಾಣಸಿ[ಡಿ.29]: ಮಕ್ಕಳನ್ನು ಹೆದರಿಸಲು ಭೂತಗಳ ಕಥೆ ಹೇಳುವುದು ಗೊತ್ತು. ಇನ್ನು ಭೂತದ ಕಾಟಕ್ಕೆ ಒಳಗಾದವರಿಗೆ ಮಾಂತ್ರಿಕರು ಕಾಟ ಬಿಡಿಸುವುದು ಗೊತ್ತು. ವೈಜ್ಞಾನಿಕವಾಗಿಯೂ ಇಂಥ ಮನೋರೋಗಿಗಳಿಗೆ ಚಿಕಿತ್ಸೆ ಕೊಡುವುದು ಗೊತ್ತು. ಆದರೆ ಇದೇ ಮೊದಲ ಬಾರಿಗೆ ಹೀಗಾಗಿ ಭೂತಗಳ ಕಾಟದಿಂದ ಬಳುತ್ತಿರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆಯೇ ವೈದ್ಯರಿಗೊಂದು ಕೋರ್ಸ್ ಆರಂಭಿಸಲಾಗುತ್ತಿದೆ.
ಬನಾರಸ್ ಹಿಂದು ವಿಶ್ವವಿದ್ಯಾಲಯ ವಾರಾಣಸಿಯಲ್ಲಿ 2020ರ ಜನವರಿಯಿಂದ 6 ತಿಂಗಳ ಕೋರ್ಸ್ ಆರಂಭಿಸುತ್ತಿದೆ. ಭಾರತದಲ್ಲಿ ಭಾರತದಲ್ಲಿ ಇಂಥ ಕೋರ್ಸ್ ಇದೇ ಮೊದಲು.
ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಬ್ಯಾಚುಲರ್ ಪದವಿ (ಬಿಎಎಂಎಸ್) ಪಡೆದವರು ಮತ್ತು ಎಬಿಬಿಎಸ್ ಪದವಿ ಪಡೆದವರು ಭೂತ ವಿದ್ಯೆಯ ಕೋರ್ಸ್‌ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಆಯುರ್ವೇದ ತಜ್ಞರು ಈ ಕೋರ್ಸ್ ಬಗ್ಗೆ ಪಾಠ ಮಾಡಲಿದ್ದಾರೆ.
10 ವಿದ್ಯಾರ್ಥಿಗಳ 2 ಬ್ಯಾಚಿನಲ್ಲಿ ಕೋರ್ಸ್ ಆರಂಭಿಸಲಾಗುತ್ತದೆ. ಮೊದಲ ಬ್ಯಾಚ್ 2020ರ ಜ.1ರಿಂದ ಆರಂಭವಾಗಲಿದೆ. ಭೂತವನ್ನು ನೋಡಿದ್ದೇವೆ ಎಂದು ಹೇಳುವವರಿಗೆ ಮತ್ತು ಭೂತದ ಬಗ್ಗೆ ಭಯ ಇರುವವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ವೈದ್ಯರಿಗೆ ಹೇಳಿಕೊಡಲಾಗುತ್ತದೆ. ಮುಖ್ಯವಾಗಿ ಮಾನಸಿಕ ಅಸ್ವಸ್ಥತೆ, ತಿಳಿಯದೇ ಇರುವ ಕಾರಣದಿಂದ ಉಂಟಾಗುವ ರೋಗಗಳ ಬಗ್ಗೆ ಈ ಕೋರ್ಸ್‌ನಲ್ಲಿ ಗಮನ ಕೇಂದ್ರೀಕರಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.