ಕಲಘಟಗಿ[ನ.7]: ವೀರರಾಣಿ ಕಿತ್ತೂರಿನ ಚೆನ್ನಮನ ಶೌರ್ಯ ಸಾಹಸ ಇಂದಿನ ನಾಡಿನ ಪ್ರತಿಯೊಬ್ಬ ಮಕ್ಕಳಲ್ಲಿ ಜಾಗೃತವಾಗಬೇಕು. ನಾಡು- ನುಡಿ ವಿಷಯದಲ್ಲಿ ಚೆನ್ನಮ್ಮನ ಕೆಚ್ಚೆದೆಯ ಹೋರಾಟ ಮನೋಭಾವ ಬರಬೇಕು ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. 

ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ವತಿಯಿಂದ ಜಿಲ್ಲಾ ಘಟಕದ ಆಶ್ರಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವ ಮತ್ತು ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಇತಿಹಾಸವನ್ನು ತಿರುಚುವ ಕೆಲಸ ಆಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಚೆನ್ನಮಾಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಪ್ರಥಮ ಸ್ವಾಂತಂತ್ರ್ಯ ಸೇನಾನಿ ಚೆನ್ನಮಾಜಿ ಅವರಿಗೆ ಗೌರವ ಸನ್ಮಾನಗಳು ಸಿಗುವಂತಾಗಲಿ. ಸಾಮಾಜಿಕ ನ್ಯಾಯದೊರಕುವಂತಾಗಬೇಕು. ಸಮಾಜದ ಏಳಿಗೆಗೆಕಾಯಾ, ವಾಚಾ, ಮನಸ್ಸಿನಿಂದ ಶ್ರಮಿಸುವಂತಾಗಲಿ ಎಂದರು.

ಶಾಸಕ ಸಿ.ಎಂ. ನಿಂಬಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

ರಾಜಶೇಖರ ಮೇಣಸಿನಕಾಯಿ ಅನ್ನದಾನೇಶ್ವರಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳುಮತ್ತು ಯುವ ಮುಖಂಡ ಮುತ್ತಪ್ಪ ಶಿವಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಮಾಜದ ಗಣ್ಯರಿಗೆಸನ್ಮಾನಿಸಲಾಯಿತು. ಮೋಹನ ಲಿಂಬಿಕಾಯಿ, ವಿ.ಎಸ್. ಪಾಟೀಲ, ಎಸ್.ಆರ್.ಪಾಟೀಲ, ಈರವ್ವದಾಸನಕೊಪ್ಪ, ನಂದಕುಮಾರ ಪಾಟೀಲ, ಚಂದ್ರಗೌಡಪಾಟೀಲ, ಶಂಕರಪ್ಪ ಬೆಲ್ಲದ, ನಿಜಗುಣಿ ಕೆಲಗೇರಿಮಂಜುನಾಥ ಗೌಡ ಮುರಳ್ಳಿ, ನಿಂಗಪ್ಪ ಸುತಗಟ್ಟಿ,ಫಕ್ಕೀರಪ್ಪ ಗಂಜಿಗಟ್ಟಿ, ಸೋಮನಗೌಡ ಹುಲಿ,ಬಸವರಾಜ ಮನಗುಂಡಿ, ಗೌರಿ ಹೀರೆಮಠ,ಸಮಾಜದ ವಿವಿಧ ಮುಖಂಡರು ಭಾಗವಹಿಸಿದ್ದರು.