ಧಾರವಾಡ, (ಮಾ.19): ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದಿದೆ.ಪರಿಣಾಮ ಕಟ್ಟಡದ ಅವಶೇಷಗಳಡಿಯಲ್ಲಿ 100ಕ್ಕೂ ಹೆಚ್ಚು ಜನರು ಸಿಲುಕ್ಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯ ನಡೆದಿದೆ.

"

ಮಾಜಿ ಸಚಿವ ವಿನಯ್ ಕುಲ್ಕರ್ಣಿ ಅವರ ಸಂಬಂಧಿ ಸಂತ್ರಿ ಎನ್ನುವರಿಗೆ ಸೇರಿದ ಕಟ್ಟಡ ಎಂದು ತಿಳಿದುಬಂದಿದೆ. ಧಾರವಾಡದ ಹೊಸ ಬಸ್ ಸ್ಟ್ಯಾಂಡ್ ಸಮೀಪ  ಕುಮಾರೇಶ್ವರನಗರದಲ್ಲಿ 2 ವರ್ಷಗಳಿಂದ ಈ ಬೃಹತ್ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣವಾಗುತ್ತಿತ್ತು. 

ಸುಮಾರು 4 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಿಸುತ್ತಿದ್ದ ಕಟ್ಟಡ ಇಂದು (ಮಂಗಳವಾರ) ಏಕಾಏಕಿ ಕುಸಿದುಬಿದ್ದಿದೆ. 

ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡದ ಗ್ರೌಂಡ್ ಹಾಗೂ ಒಂದು, ಎರಡರಲ್ಲಿ ಮಳಿಗೆಗಳು ಕಾರ್ಯಾರಂಭ ಮಾಡಿದ್ದವು. 

ಗ್ರೌಂಡ್ ಹಾಗೂ ಒಂದು, ಎರಡರಲ್ಲಿ ಅಂತಿಸ್ತಿನಲ್ಲಿ  ಹೋಟೆಲ್, ಪರ್ನಿಚರ್ ಅಂಗಡಿ, ಕಟಿಂಗ್ ಸಲೂನ್, ಮೆಡಿಕಲ್ ಶಾಪ್ ಸೇರಿದಂತೆ ಇತರೆ ಅಂಗಡಿಗಳು ಇದ್ದವು.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.