ಧಾರವಾಡ[ಅ.23]: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಬಗ್ಗೆ ಮಾತನಾಡುವ ಮಾಜಿ ಸಿಎಂ ಸಿದ್ದರಾಮಯ್ಯ 'ಆತ್ಮಾಹುತಿ' ಪುಸ್ತಕ ಓದಲಿ. ಅಭಿನವ ಭಾರತ ಸಂಘಟನೆಯನ್ನು ಯಾಕೆ ಕಟ್ಟಿದರು ಅನ್ನೋದನ್ನು ನೋಡಲಿ. ಸಾವರ್ಕರ್ ಬಗ್ಗೆ ಸತ್ಯ ಸಂಗತಿ ಗೊತ್ತಾಗಬೇಕಿದೆ. ಇದು ಸಾವರ್ಕರ್ ಗೆ ಮಾಡುವ ಅಪಮಾನ ಅಲ್ಲ. ಸಾವರ್ಕರ್ ಗೆ ಉಗಿದರೆ ಅದು ಅವರ ಮುಖಕ್ಕೆ ತಾವೇ ಉಗಿದುಕೊಂಡಂತೆ ಇವರು ಸಾವರ್ಕರ್ ಬಗ್ಗೆ ಮಾತನಾಡಿ ತಮಗೆ ತಾವೇ ಅಪಮಾನ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಹೋದಾಗ ಪುಸ್ತಕ ಕಳಿಸುತ್ತೆನೆ ಅಂದು ಹೇಳಿದ್ದೆ, ಈಗ ಬೆಂಗಳೂರಿಗೆ ಹೋಗಿ ಅವರ ಜೊತೆ ಮಾತನಾಡಿ ಪುಸ್ತಕ ನೀಡುತ್ತೇನೆ.  ಇನ್ನೊಂದು ಚರ್ಚೆ ನಡೆಯಬೇಕಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗೋಡ್ಸೆ ಮಹ್ಮಾ ಗಾಂಧೀಜಿಗೆ ಗುಂಡು ಹಾಕಿದ, ಅದು ಸತ್ಯ. ಆದರೆ ಗಾಂಧೀಜಿಯನ್ನು ಜನ ಮಾನಸದಿಂದ ದೂರ ಮಾಡಿದವರು ಯಾರು? ಈ ಬಗ್ಗೆಯೂ ಚರ್ಚೆ ಆಗಬೇಕಿದೆ. ಯಾವ ಕಾಂಗ್ರೆಸ್ಸಿಗರು ಗಾಂಧೀಜಿಯವರ ಹೆಸರು ಇಟ್ಕೊಂಡಿದ್ದಾರೆ? ಯಾರು ಗಾಂಧೀಜಿಯವರ ತತ್ವಗಳಡಿ ಬದುಕುತ್ತಿದ್ದಾರೆ? ಅನ್ನೋದು ಕೂಡ ಚರ್ಚೆಯಾಗಬೇಕು. ಗಾಂಧೀಜಿಯವರ ಪಾರ್ಟಿ ನಮ್ಮದು. ಗಾಂಧೀಜಿಯ ರಾಜಕೀಯ ವಾರಸುದಾರರು ಎಂದು ಹೇಳಿಕೊಳ್ತಾರೆ. ನಿಜಕ್ಕೂ ಇವರು ಗಾಂಧಿ ತತ್ವದ ವಾರಸುದಾರರಾಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಪ್ರಕೃತಿಯನ್ನು ನಿಯಂತ್ರಿಸುವ ತಾಂತ್ರಿಕತೆ ಕಂಡು ಹಿಡಿದಿಲ್ಲ

ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗ ತುಂಬಾ ತಾಂತ್ರಿಕಥೆ ಬಂದಿದೆ. ಪ್ರಕೃತಿಯನ್ನು ನಿಯಂತ್ರಿಸುವ ತಾಂತ್ರಿಕತೆ ಕಂಡು ಹಿಡಿದಿಲ್ಲ. ಮಾನವೀಯ ನೆಲೆಯಲ್ಲಿ ನಾವು ಜನರಿಗೆ ಸ್ಪಂದಿಸಬೇಕಿದೆ. ಪ್ರವಾಹಕ್ಕೆ ಒಳಗಾದವರ ನೆರವಿಗೆ ನಿಂತುಕೊಳ್ಳುತ್ತೇವೆ. ಸಮಾಜ ಕೂಡ ಸ್ಪಂದನೆ ನೀಡಿದೆ. ಸರ್ಕಾರ ಕೂಡಾ ಸ್ಪಂದನೆ ನೀಡಿದೆ. ತಾತ್ಕಾಲಿಕ ಪರಿಹಾರವನ್ನು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದೇವೆ. ಹತ್ತು ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ. ಮಾನವಿಯ ನೆಲೆ ಇರುವ ಸರ್ಕಾರ ನಮ್ಮದು.
ಹೀಗಾಗಿ ಇದನ್ನೆಲ್ಲ ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಜಯಭೇರಿ 

ಮಹಾರಾಷ್ಟ್ರ ಮತ್ತು ಹರಿಯಾಣಾ ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಜಾಮೀನು ಅರ್ಜಿ ಹಾಕಿದ್ದಾರೆ. ಸೋಲು ಗ್ಯಾರಂಟಿ ಎನ್ನುವದು ಗೊತ್ತಾಗಿದೆ. ಸೋಲಿಗೆ ಸಬೂಬನ್ನು ಈಗಲೇ ಹುಡುಕುತ್ತಿದ್ದಾರೆ. ಸೋಲಿಗೆ ಸಬೂಬು ಇವಿಎಮ್ ಅನ್ನುತ್ತಿದ್ದಾರೆ. ಆದರೆ ಅವರು ಗೆದ್ದರೆ ಅದು ಜನಾದೇಶ. ಹಲವು ರಾಜ್ಯಗಳಲ್ಲಿ ಇವರು ಗೆದ್ದಾಗ ಮೋದಿ ಕಥೆ ಮುಗೀತು ಎಂದಿದ್ದರು.
ಸಧ್ಯ ಸೋತ ಕೂಡಲೇ ಇವಿಎಮ್ ಕಾರಣ ಎನ್ನುತ್ತಾರೆ. ಸೋಲಿಗೆ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವಂಥ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ನಾವು ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.