ಧಾರವಾಡ, [ಏ.05]:  ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡದ ಹೊಸ ಯಲ್ಲಾಪುರ ಬಡಾವಣೆಯ ಸ್ಮಶಾನದಲ್ಲಿ ನಡೆದಿದೆ.

ನಮಃ ಶಿವಾಯ ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಇಂದು[ಶುಕ್ರವಾರ] ಅಮವಾಸ್ಯೆ ಇರುವ ಕಾರಣ  ಒಂದು ದಿನ ಮುಂಚೆ ಅಂದ್ರೆ ನಿನ್ನೆ ಗುರುವಾರ ರಾತ್ರಿ ವಾಮಾಚಾರ ಮಾಡಲು ಸ್ಮಶಾನಕ್ಕೆ ತೆರಳಿದ್ದು, ಈ ವೇಳೆ ಕಾರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
 
ಕಾರಿನಲ್ಲಿ ಕುಂಕುಮ ಲೇಪಿತ ತೆಂಗಿನಕಾಯಿ, ಕಪ್ಪು ಬಟ್ಟೆಯ ಗೊಂಬೆಗಳು ಪತ್ತೆ ಸೇರಿದಂತೆ ಹಲವು ಪೂಜಾ ಸಾಮಗ್ರಿ ಪತ್ತೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿಅಮವಾಸ್ಯೆ ಇರುವ ಕಾರಣ ವಾಮಾಚಾರಕ್ಕೆ ಬಂದಿದ್ದ ಎನ್ನಲಾಗಿದೆ. 

ವಿಷಯ ತಿಳಿದು ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.