Asianet Suvarna News Asianet Suvarna News

Lizard Falling Food ಹುಬ್ಬಳ್ಳಿ ಹೋಟೆಲ್ ಮಾಲೀಕನಿಂದ ಗ್ರಾಹಕರಿಗೆ ₹90,000 ಪರಿಹಾರ

ಪೂರಿ ಬಾಜಿಯಲ್ಲಿ ಹಲ್ಲಿ ಬಿದ್ದ ಪ್ರಕರಣ 90 ಸಾವಿರ ರೂ ಪರಿಹಾರಕ್ಕೆ  ಹುಬ್ಬಳ್ಳಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ.

Lizard Falling on food hubballi hotel owner Rs. 90,000 relief to customers gow
Author
Bengaluru, First Published Apr 11, 2022, 9:29 PM IST

ಹುಬ್ಬಳ್ಳಿ,(ಏ.11): ಹುಬ್ಬಳ್ಳಿ (Hubballi) ತಾಲೂಕಿನ ವರೂರು ಗ್ರಾಮದ ಹೋಟೆಲ್ ಒಂದರಲ್ಲಿ ಪೂರೈಸಿದ್ದ  ಪೂರಿ-ಬಾಜಿಯಲ್ಲಿ ಹಲ್ಲಿ ಬಿದ್ದಿದ್ದ ಪ್ರಕರಣಕ್ಕೆ (Lizard Falling on Food ) ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಗೆ 90 ಸಾವಿರ ರೂಪಾಯಿಗಳ  ಪರಿಹಾರ ನೀಡಲು ಹೋಟೇಲಿನ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (Consumer Redressal Forum) ಆದೇಶಿಸಿದೆ.

2018 ರ ಸೆಪ್ಟೆಂಬರ್ 26 ರಂದು  ಹುಬ್ಬಳ್ಳಿಯ ವರೂರಿನ ಕಾಮತ್ ಉಪಚಾರ ಹೋಟೆಲ್‌ಗೆ ಬೆಳಗಿನ ಉಪಹಾರಕ್ಕಾಗಿ ಹೋಗಿದ್ದ ಗ್ರಾಹಕರಾದ ವಿನಾಯಕ ಮತ್ತು ಸಹನಾ ಅವರು, ಪೂರಿ ಭಾಜಿ ತಿಂಡಿಗೆ ಆದೇಶಿಸಿದ್ದರು. ಪೂರೈಸಿದ ಉಪಹಾರದಲ್ಲಿ  ಬೆಂದ ಹಲ್ಲಿ ಇರುವುದನ್ನು ಗಮನಿಸಿದ ಇಬ್ಬರೂ ಗ್ರಾಹಕರು ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದರು. ಸಿಬ್ಬಂದಿ  ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಧಾರವಾಡದಲ್ಲಿ ಜಲಜೀವನ್ ಮಿಷನ್ ಯೋಜನೆ ಪರಿಣಾಮಕಾರಿ ಅನುಷ್ಠಾನ

ವಿಷಪೂರಿತ ಉಪಹಾರ ಸೇವಿಸಿದ್ದ  ಗ್ರಾಹಕ ವಿನಾಯಕ ಅವರಿಗೆ  ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಕಾರಣ  ಶಿಗ್ಗಾಂವ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು.

ಈ ಕುರಿತು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದರು.ದೂರಿನ ವಿಚಾರಣೆ ನಡೆಸಿದ ಆಯೋಗವು ಕಾಮತ್ ಉಪಚಾರ ಹೊಟೇಲ್‌‌ನವರಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಆಗಿದೆ ಎಂದು ತೀರ್ಮಾನಿಸಿ.

DAVANAGERE ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

 ಹೊಟೇಲ್‌ನವರು ಇಬ್ಬರೂ ಗ್ರಾಹಕರಿಗೆ ಒಟ್ಟು 90 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆಯೋಗದ ಆದೇಶಿಸಿದೆ. ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ರವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios