Asianet Suvarna News Asianet Suvarna News

ಧಾರ​ವಾ​ಡ: ಎರಡು ಬಸ್ಸು​ಗಳ ಮಧ್ಯೆ ಸಿಲು​ಕಿದ ಗೂಡ್ಸ್‌ ವಾಹ​ನ

ಗೂಡ್ಸ್‌ ವಾಹ​ನ​ದ ಚಾಲಕ ಎರಡು ಬಸ್ಸು​ಗಳ ಮಧ್ಯೆ ಸಿಲುಕಿ ಸುಮಾರು ಅರ್ಧ ಗಂಟೆ ಕಾಲ ನರ​ಳಾ​ಡಿದ್ದಾನೆ| ಎರಡೂ ಬಸ್ಸು​ಗಳ ಮಧ್ಯೆ ಸಿಕ್ಕು ಅಪ್ಪ​ಚ್ಚಿ​ಯಾದ ಗೂಡ್ಸ್‌ ವಾಹನದ ಚಾಲಕ ಲೋಹಿತ ಲಕ್ಕುಂಡಿ​ಮಠ (28) ಎಂಬಾತ​ನನ್ನು ಸ್ಥಳೀ​ಯರ ಸಹ​ಕಾ​ರ​ದಿಂದ ಟ್ರಾಫಿಕ್‌ ಪೊಲೀ​ಸರು ಹಾಗೂ ಅಗ್ನಿ​ಶಾ​ಮಕ ದಳದ ಸಿಬ್ಬಂದಿಯಂದ ರಕ್ಷಣೆ|  ಆತ​ನಿಗೆ ಗಂಭೀರ ಗಾಯ​ವಾ​ಗಿಲ್ಲ| ಲೋಹಿತ ಸದ್ಯ ಸಿವಿಲ್‌ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ|

Goods Vehicle Caught Between Two Buses in Dharwad
Author
Bengaluru, First Published Oct 18, 2019, 1:19 PM IST

ಧಾರ​ವಾ​ಡ(ಅ.18): ಆಕ​ಸ್ಮಿ​ಕ​ ಸಂದ​ರ್ಭ​ದಲ್ಲಿ ಗೂಡ್ಸ್‌ ವಾಹ​ನ​ವೊಂದರ ಚಾಲಕ ಎರಡು ಬಸ್ಸು​ಗಳ ಮಧ್ಯೆ ಸಿಲುಕಿ ಸುಮಾರು ಅರ್ಧ ಗಂಟೆ ಕಾಲ ನರ​ಳಾ​ಡಿದ ಘಟನೆ ನಗರದಲ್ಲಿ ಗುರು​ವಾರ ಮಧ್ಯಾಹ್ನ ನಡೆ​ದಿದೆ.

ಎರಡೂ ಬಸ್ಸು​ಗಳ ಮಧ್ಯೆ ಸಿಕ್ಕು ಅಪ್ಪ​ಚ್ಚಿ​ಯಾದ ಗೂಡ್ಸ್‌ ವಾಹನದ ಚಾಲಕ ಹುಬ್ಬಳ್ಳಿ ಮಂಗ​ಳ​ವಾ​ರ ಪೇಟ್‌ನ ಲೋಹಿತ ಲಕ್ಕುಂಡಿ​ಮಠ (28) ಎಂಬಾತ​ನನ್ನು ಸ್ಥಳೀ​ಯರ ಸಹ​ಕಾ​ರ​ದಿಂದ ಟ್ರಾಫಿಕ್‌ ಪೊಲೀ​ಸರು ಹಾಗೂ ಅಗ್ನಿ​ಶಾ​ಮಕ ದಳದ ಸಿಬ್ಬಂದಿ ರಕ್ಷಿ​ಸಿದ್ದು, ಅದೃಷ್ಟವಶಾತ್‌ ಆತ​ನಿಗೆ ಗಂಭೀರ ಗಾಯ​ವಾ​ಗಿಲ್ಲ. ಲೋಹಿತ ಸದ್ಯ ಸಿವಿಲ್‌ ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

ಹೇಗಾಯ್ತು ಘಟ​ನೆ

ಇಲ್ಲಿನ ಕಲಾಭವನದ ಮುಂದೆ ನಿತ್ಯ ದಟ್ಟ​ವಾದ ಟ್ರಾಫಿಕ್‌ ಉಂಟಾ​ಗು​ತ್ತದೆ. ಒಂದು ವಾಹ​ನ​ಗಳ ಹಿಂದೆ ಒಂದು ಸಾಲು ಹಚ್ಚು​ವುದು ಸಾಮಾನ್ಯ. ಅಂತೆಯೇ, ಗುರು​ವಾರ ಸಹ ಬಸ್ಸಿನ ಹಿಂದೆ ಗೂಡ್ಸ್‌ ವಾಹನ ಹೋಗು​ವಾಗ ಬಸ್ಸಿನ ಚಾಲಕ ಏಕಾ​ಏಕಿ ಬ್ರೇಕ್‌ ಹಾಕಿ​ದ್ದಾನೆ. ಗೂಡ್ಸ್‌ ವಾಹನದ ಹಿಂದೆಯೇ ಬಸ್ಸು ಇದ್ದ ಕಾರಣ ಎರಡು ಬಸ್ಸು​ಗಳ ಮಧ್ಯೆ ಗೂಡ್ಸ್‌ ವಾಹನ ಸಿಕ್ಕು ಅಪ್ಪ​ಚ್ಚಿ​ಯಾ​ಗಿದೆ. ಕೂಡಲೇ ಹಿಂದೆ-ಮುಂದಿನ ಎರಡೂ ಬಸ್ಸು​ಗ​ಳನ್ನು ತೆರ​ವು​ಗೊ​ಳಿ​ಸಿ​ದರೂ ಗೂಡ್ಸ್‌ ವಾಹ​ನ​ದ​ಲ್ಲಿಯೇ ಚಾಲಕ ಲೋಹಿತ ಸಿಕ್ಕು​ಹಾ​ಕಿ​ಕೊಂಡಿ​ದ್ದನು. ಕಾಲು, ಮೂಗು ಹಾಗೂ ಬಾಯಿಗೆ ಪೆಟ್ಟಾ​ಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆ ನಡೆದ ಕೂಡಲೇ ಕಲಾ​ಭ​ವನ ವೃತ್ತ​ದ​ಲ್ಲಿದ್ದ ಟ್ರಾಫಿಕ್‌ ಪೊಲೀ​ಸರು ರಸ್ತೆ ಬಂದ್‌ ಮಾಡಿ ವಾಹ​ನ​ದಲ್ಲಿ ಸಿಲು​ಕಿದ ಲೋಹಿ​ತ್‌ನನ್ನು ಹೊರ ತೆಗೆ​ಯುವ ಕಾರ್ಯಾ​ಚ​ರಣೆ ನಡೆ​ಸಿ​ದರು. ಸುಮಾರು ಹೊತ್ತು ಕೈಯಿಂದಲೇ ಪ್ರಯತ್ನ ನಡೆ​ಸಿ​ದರೂ ಫಲ​ಕಾರಿ ಆಗ​ಲಿಲ್ಲ. ಕೊನೆಗೆ ಮೆಟಲ್‌ ಕಟರ್‌ ಬಳಸಿ ವಾಹ​ನ​ದಲ್ಲಿ ಸಿಲು​ಕಿದ ಚಾಲ​ಕ​ನನ್ನು ಸುರ​ಕ್ಷಿತವಾಗಿ ಹೊರ ತೆಗೆ​ಯ​ಲಾ​ಯಿತು. ಈ ಸಂಬಂಧ ಟ್ರಾಫಿಕ್‌ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖ​ಲಾ​ಗಿ​ದೆ.
 

Follow Us:
Download App:
  • android
  • ios